ಒಮನ್: ಮಗಳ ಹೆರಿಗೆ ಆರೈಕೆಗೆ ಊರಿಂದ ಬಂದ ಗೃಹಿಣಿ ಹೃದಯಾಘಾತದಿಂದ ನಿಧನ
ಮಸ್ಕತ್,ಜ.21: ಹೆರಿಗೆಯಾದ ಪುತ್ರಿಯ ಆರೈಕೆಗೆ ಊರಿನಿಂದ ಬಂದ ಗೃಹಿಣಿಯೊಬ್ಬರು ವಿಮಾನ ನಿಲ್ದಾಣದಲ್ಲಿಳಿದು ಪುತ್ರಿಯಿದ್ದಲ್ಲಿಗೆಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇರಳದ ಎರ್ನಾಕುಲಂ ವೆಟ್ಟಿಪರಂಬ್ ಆಂಟನಿಯವರ ಪತ್ನಿ ಮೇರಿ(63) ಮಸ್ಕತ್ನಿಂದ ಮುನ್ನೂರು ಕಿಮಿ ದೂರದ ಇಬ್ರಿಯಿಲ್ಲಿ ನರ್ಸ್ ಆಗಿ ಉದ್ಯೋಗದಲ್ಲಿರುವ ನಿಮ್ಮಿಯ ಹೆರಿಗೆ ಆರೈಕೆಗೆ ಗುರುವಾರ ರಾತ್ರೆ ಕೊಚ್ಚಿನ್ನಿಂದ ಜೆಟ್ ವೇರ್ವೇಸ್ ವಿಮಾನದಲ್ಲಿ ಮಸ್ಕತ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ವಿಮಾನದಲ್ಲಿಯೇ ಅಸೌಖ್ಯಗೊಂಡಿದ್ದ ಮೇರಿಯವರನ್ನು ಕರೆದು ಕೊಂಡು ಅಳಿಯ, ಮಗಳು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೆಳಗ್ಗಿನ ಜಾವ ಒಂದು ಗಂಟೆ ವೇಳೆಗೆ ಅವರು ಕಾರಿನಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.
Next Story