ವಿಶ್ವದಾದ್ಯಂತ ಒಂದೇ ದಿನದಲ್ಲಿ 7 ಹೊಸ ಶೋರೂಮ್ಗಳನ್ನು ತೆರೆದ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್
ಯುಎಇ , ಜ.21 : ಮುಂಚೂಣಿ ಜ್ಯುಯೆಲ್ರಿ ರಿಟೇಲರ್ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಒಂದೇ ದಿನದಲ್ಲಿ ವಿಶ್ವದಾದ್ಯಂತ 7 ಹೊಸ ಶೋರೂಮ್ಗಳನ್ನು ಆರಂಭಿಸಿದೆ.
ಅನೇಕ ಗಣ್ಯರು, ವಿಶೇಷ ಆಹ್ವಾನಿತ ಅತಿಥಿಗಳು ಹಾಗೂ ಹಿತೈಷಿಗಳ ಉಪಿಸ್ಥಿತಿಯಲ್ಲಿ ಯುಎಇಯಲ್ಲಿ 5 ಹೊಸ ಶೋರೂಮುಗಳು, ಕುವೈತ್ ಹಾಗೂ ಬೆಹರಾನ್ ನಲ್ಲಿ ತಲಾ 1 ಶೋರೂಮ್ ಗಳನ್ನು ತೆರೆದಿವೆ.
ಉದ್ಘಾಟನೆಯ ನಂತರ ಮಾತನಾಡಿದ ಮಲ್ಬಾರ್ ಗ್ರೂಪ್ನ ಅಧ್ಯಕ್ಷ ಎಮ್.ಪಿ. ಅಹ್ಮದ್ , ನಾವು ಈ ಸಾಧನೆಯನ್ನು ನಮ್ಮ ಲಕ್ಷಾಂತರ ಸಂತುಷ್ಟ ಗ್ರಾಹಕರಿಗೆ ಮೀಸಲಿಟ್ಟೀದ್ದೇವೆ . ಕಂಪೆನಿಯ ಆರಂಭದಿಂದ ನಮ್ಮೊಂದಿಗಿದ್ದು ನಮ್ಮ ಮೇಲಿಟ್ಟಿರುವ ವಿಶ್ವಾಸಕ್ಕಾಗಿ ನಾವು ಅವರಿಗೆ ಧನ್ಯವಾದವನ್ನರ್ಪಿಸುತ್ತೇವೆ. ನಮ್ಮ ಯಶಸ್ವಿ ಪ್ರಯಾಣದ ಒಂದು ಅಂಗವಾಗಿರುವ ಹಾಗೂ ಇದರಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಧಿಕಾರಿಗಳು, ಹೂಡಿಕೆದಾರರು, ನಿರ್ವಹಣಾ ತಂಡದ ಸದಸ್ಯರು ಹಾಗೂ ಹಿತೈಷಿಗಳಿಗೆ ನಮ್ಮ ಹೃತ್ಪೂರ್ವಕವಾದ ಕೃತಜ್ಞತೆಗಳು ಎಂದು ಹೇಳಿದರು.
ಹೊಸ ಶೋರೂಮ್ ಗಳ ವಿವರ ಈ ಕೆಳಗಿನಂತಿದೆ:
162ನೇ ಶೋರೂಮ್ : ಯುಎಇಯ, ದುಬೈ, ಎಐ ಬರ್ಶಾ ಮಾಲ್ನಲ್ಲಿ ಎಮ್ಜಿಡಿ - ಲೈಫ್ಸ್ಟೈಲ್ ಜ್ಯುಯೆಲ್ರಿ ಔಟ್ಲೆಟ್ ಶೋರೂಮ್ ನ್ನು ಮಲ್ಬಾರ್ ಗ್ರೂಪ್ನ ಅಧ್ಯಕ್ಷರಾದ ಶ್ರೀ ಎಮ್. ಪಿ. ಅಹ್ಮದ್ರವರು ಉದ್ಘಾಟಿಸಿದರು.
163ನೇ ಶೋರೂಮ್: ಯುಎಇ, ದುಬೈ, ಸತ್ವಾದಲ್ಲಿ ಮಲಬಾರ್ ಗ್ರೂಪ್ನ ಸಹ-ಅಧ್ಯಕ್ಷರಾದ ಡಾ. ಪಿ.ಎ. ಇಬ್ರಾಹೀಂ ಹಾಜಿಯವರೊಂದಿಗೆ ಮಲ್ಬಾರ್ ಗ್ರೂಪ್ನ ಅಧ್ಯಕ್ಷರಾದ ಶ್ರೀ ಎಮ್.ಪಿ. ಅಹ್ಮದ್ರವರು ಜಂಟಿಯಾಗಿ ಉದ್ಘಾಟಿಸಿದರು.
164ನೇ ಶೋರೂಮ್ : ಗೋಲ್ಡ್ ಸೆಂಟರ್ , ಯುಎಇ, ದುಬೈ ಮಾಲ್ನಲ್ಲಿ ಎನ್ಬಿಎಫ್ ಕ್ಯಾಪಿಟಲ್ ಲಿಮಿಟೆಡ್, ನ್ಯಾಷನಲ್ ಬ್ಯಾಂಕ್ ಆಫ್ ಫೈಜೈಹ್ಹಾ ಪಿಜೆಎಸ್ಸಿ ಇದರ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಬಿ. ದಾಸ್ ಮತ್ತು ಕಾರ್ಪೋರೇಟ್ ಆ್ಯಂಡ್ ಇನ್ಸ್ಟಿಟೂಷನಲ್ ಬ್ಯಾಂಕಿಂಗ್ ನ್ಯಾಷನಲ್ ಬ್ಯಾಂಕ್ ಆಫ್ ಫೈಜೈಹ್ಹಾ ಪಿಜೆಎಸ್ಸಿ ಮುಖ್ಯಸ್ಥ ವಿಕ್ರಮ್ ಪ್ರಧಾನ್ ಜಂಟಿಯಾಗಿ ಉದ್ಘಾಟಿಸಿದರು.
165ನೇ ಶೋರೂಮ್: ಮಲ್ಬಾರ್ ಗ್ರೂಪ್ನ ಸಹ ಅಧ್ಯಕ್ಷ ಡಾ. ಪಿ.ಎ .ಇಬ್ರಾಹೀಂ ಹಾಜಿಯವರೊಂದಿಗೆ ಮಲ್ಬಾರ್ ಗ್ರೂಪ್ನ ಅಧ್ಯಕ್ಷರಾದ ಎಮ್. ಪಿ. ಅಹ್ಮದ್ರವರು ಜಂಟಿಯಾಗಿ ಉದ್ಘಾಟಿಸಿದರು.
166ನೇ ಶೋರೂಮ್ : ಮಲ್ಬಾರ್ ಗ್ರೂಪ್ನ ನಿರ್ದೇಶಕರಾದ ಮಾಯನ್ಕುಟ್ಟಿ. ಸಿ. ಯವರೊಂದಿಗೆ ಮಲ್ಬಾರ್ ಗ್ರೂಪ್ನ ಅಧ್ಯಕ್ಷರಾದ ಎಮ್. ಪಿ.ಅಹ್ಮದ್ರವರು ಶಾರ್ಜಾ ಶಾಪಿಂಗ್ ಸೆಂಟರ್, ಕೆ. ಎಮ್. ಟ್ರೇಡಿಂಗ್, ರೋಲಾ, ಶಾರ್ಜಾ, ಯುಎಇ ಯಲ್ಲಿ ಜಂಟಿಯಾಗಿ ಉದ್ಘಾಟಿಸಿದರು.
167ನೇ ಶೋರೂಮ್: ಎಮ್ಜಿಡಿ - ಲೈಫ್ಸ್ಟೈಲ್ ಜ್ಯುಯೆಲ್ರಿ ಔಟ್ಲೆಟ್ ಅನ್ನು ಸಾಮಾ ಮಾಲ್, ಕುವೈತ್ನಲ್ಲಿ ಮಲ್ಬಾರ್ ಗೋಲ್ಡ್ ಮತ್ತು ಡೈಮಂಡ್ಸ್ನ ತಂಡದ ಸದಸ್ಯರು, ಇತರ ಗಣ್ಯರು, ಹಿತೈಷಿಗಳು ಹಾಗೂ ಅತಿಥಿಗಳ ಉಪಸ್ಥಿತಿಯಲ್ಲಿ ಶ್ರೀಮತಿ ಜೈನಾಬ್ ಹುಸೇನ್ರವರು ಉದ್ಘಾಟಿಸಿದರು.
168ನೇ ಶೋರೂಮ್: ಎಮ್ಜಿಡಿ - ಲೈಫ್ಸ್ಟೈಲ್ ಜ್ಯುಯೆಲ್ರಿ ಔಟ್ಲೆಟ್ ಅನ್ನು ಹೇಶಮ್ ಝಾಲ್ ಖಾಲಿಫಾ ಝಾಲ್ ಅಲ್ಕ್ಬುಫ್ಲೆಸ್ಹೆಯವರು ಗೋಲ್ಡ್ ಸಿಟಿ, ಮನಮಾ, ಬೆಹರಾನ್ನಲ್ಲಿ ಉದ್ಘಾಟಿಸಿದರು.