ದುಬೈ: ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಯಾದ ಭಾರತೀಯ
ದುಬೈ, ಫೆ. 3: ಯುಎಇಯಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಭಾರತೀಯರೊಬ್ಬರು ರಾತ್ರಿ ಬೆಳಗಾಗುವುದರೊಳಗಾಗಿ ಶ್ರೀಮಂತರಾಗಿದ್ದಾರೆ.
ಅಜೇಶ್ ಪದ್ಮನಾಭನ್ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಅದೃಷ್ಟದ ಡ್ರಾದಲ್ಲಿ ಒಂದು ಮಿಲಿಯ ಡಾಲರ್ (ಸುಮಾರು 6.73 ಕೋಟಿ ರೂಪಾಯಿ) ಬಹುಮಾನ ಗೆದ್ದಿದ್ದಾರೆ.
ಪದ್ಮನಾಭನ್ ಶಾರ್ಜಾದಲ್ಲಿ ಫೆಡರಲ್ ವಿದ್ಯುತ್ ಮತ್ತು ನೀರು ಪ್ರಾಧಿಕಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ದುಬೈ ವಿಮಾನ ನಿಲ್ದಾಣದ ‘ಮಿಲಿಯನೇರ್ ಪ್ರೊಮೋಶನ್’ನಲ್ಲಿ ನಿಯಮಿತವಾಗಿ ಪಾಲ್ಗೊಳ್ಳುತ್ತಿದ್ದರು. ಅವರು ಆನ್ಲೈನ್ನಲ್ಲಿ ತನ್ನ ವಿಜೇತ ಟಿಕೆಟನ್ನು ಖರೀದಿಸಿದ್ದರು ಎಂದು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.
Next Story