ಹೂತಿಗಳ ಆಕ್ರಮಣ: ಭದ್ರತಾ ಅಧಿಕಾರಿ ಸಾವು, ಭಾರತೀಯನಿಗೆ ಗಾಯ
ಜಿದ್ದ, ಫೆ. 23: ಸೌದಿ ಅರೇಬಿಯದ ಅಸೀರ್ ಪ್ರಾಂತದ ದಹ್ರಾನ್ ಅಲ್ ಜುನುಬ್ನಲ್ಲಿ ಹೂತಿಗಳು ನಡೆಸಿದ ಮಿಸೈಲ್ ದಾಳಿಯಲ್ಲಿ ಭದ್ರತಾ ಅಧಿಕಾರಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಭಾರತೀಯ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
ಯಮನ್ನಿಂದ ಹೂತಿಗಳು ದಾಳಿ ನಡೆಸಿದ್ದಾರೆ. ನೆಲಕ್ಕೆ ಬಿದ್ದಿದ್ದ ಮಿಸೈಲ್ನ ತುಂಡು ದೇಹಕ್ಕೆ ಚುಚ್ಚಿದ್ದರಿಂದ ಕರ್ತವ್ಯ ನಿರತ ಭದ್ರತಾ ಅಧಿಕಾರಿಮರಣಹೊಂದಿದರು. ದಹ್ರಾನ್ನ ಅಲ್ ಜುನುಬ್ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಗಾಯಗೊಂಡ ಭಾರತೀಯನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸಿವಿಲ್ ಡಿಫೆನ್ಸ್ ತಿಳಿಸಿದೆ. ಈತನ ಬಗ್ಗೆ ಹೆಚ್ಚಿನ ವಿವರ ಲಭಿಸಿಲ್ಲ ಎಂದು ವರದಿಯಾಗಿದೆ.
Next Story