ಮಂಗಳೂರು ಕಪ್ 2017 ಐದನೆ ಸೀಸನ್ ಪಂದ್ಯಾವಳಿ ಇಂದು ಪ್ರಾರಂಭ
ಅಬುಧಾಬಿ, ಫೆ.24: ಮಂಗಳೂರು ಕಪ್ 2017 ಐದನೇ ಸೀಸನ್ ಪಂದ್ಯಾವಳಿಯು ಇಂದು ಫೆ.24ರಂದು ಶೇಖ್ ಝಾಹಿದ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಮಂಗಳೂರು ಕ್ರಿಕೆಟ್ ಕ್ಲಬ್ ನ ಅಧ್ಯಕ್ಷ ಲತೀಫ್ ಕೆ.ಎಚ್ ಕಕ್ಕಿಂಜೆ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶೇಖ್ ಝಾಹಿದ್ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪ್ರೆಸ್ ಕಾನ್ಫರೆನ್ಸ್ ಕೊಠಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಂಸಿಸಿ ಯ ಧ್ಯೇಯೋದ್ದೇಶ ಮತ್ತು ಪಂದ್ಯಾವಳಿಯ ನಿಯಮಾವಳಿಯನ್ನು ಕೂಲಂಕಷವಾಗಿ ವಿವರಿಸಿದರು. ಈ ಪಂದ್ಯಾವಳಿಯ ಬವಿಜಯಿಗಳಿಗೆ ಆಕರ್ಷಕ ಬಹುಮಾನ ಘೋಷಿಸಲಾಗಿದ್ದು ಪ್ರಥಮ ಸ್ಥಾನ ಟ್ರೋಫಿ ಮತ್ತು 12222/ -AED(ದಿರ್ಹಮ್) ಮೊತ್ತ, ದ್ವಿತೀಯ ಸ್ಥಾನ ಟ್ರೋಫಿ ಮತ್ತು 6222/ -AED (ದಿರ್ಹಮ್) ಮೊತ್ತ ಅಲ್ಲದೆ ಸರಣಿ ಪುರುಷೋತ್ತಮ, ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಉತ್ತಮ ಕೀಪರ್, ಉತ್ತಮ ಕ್ಷೇತ ರಕ್ಷಕ, ಮನಮೋಹಕ ಕ್ಯಾಚ್ ಹಾಗೂ ಫೈನಲ್ ಪಂದ್ಯಪುರುಷೋತ್ತಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಅಬ್ದುಲ್ ರಶೀದ್ ತಂಡಗಳ ನಾಯಕರ ಸಮಕ್ಷಮದಲ್ಲಿ ಪಂದ್ಯಾವಳಿಯ ವೇಳಾಪಟ್ಟಿಯನ್ನು ಅಂತಿಮಗೊಳಿಸಿದರು. ಸಿತಾರಾ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಮ್, ನಿಝಾರ್ ಚಾರ್ಮಾಡಿ ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.