ದುಬೈ: ಜೂನ್ 2ಕ್ಕೆ ನೂರುಲ್ ಹುದಾ ವತಿಯಿಂದ ದುಬೈಯಲ್ಲಿ ಇಫ್ತಾರ್ ಕೂಟ
ದುಬೈ, ಮಾ.11: ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಮಾಡನ್ನೂರು ಇದರ ಯುಎಇ ರಾಷ್ಟ್ರೀಯ ಸಮಿತಿಯ ವತಿಯಿಂದ ಪ್ರಪ್ರಥಮ ಇಫ್ತಾರ್ ಕೂಟ ಕಾರ್ಯಕ್ರಮವು ಜೂನ್ 2 ಪವಿತ್ರ ರಂಜಾನ್ ತಿಂಗಳ ಮೊದಲ ಶುಕ್ರವಾರ ದುಬೈನಲ್ಲಿ ನಡೆಯಲಿದೆ.
ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ಅದ್ಯಕ್ಷರಾದ ಜನಾಬ್ ಶರೀಫ್ ಕಾವು ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 11 ರಂದು ನಡೆದ ಎಲ್ಲಾ ಸ್ಟೇಟ್ ಸಮಿತಿ ಪದಾಧಿಕಾರಿಗಳನ್ನು ಒಳಗೊಂಡ ಯಎಇ ರಾಷ್ಟ್ರೀಯ ಸಮಿತಿ ಮಾಸಿಕ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇಫ್ತಾರ ಕೂಟ ನಡೆಯುವ ಸ್ಥಳವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಯುಎಇ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೌಡಿಚ್ಚಾರ್ ಅವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
Next Story