ಪಾಕಿಸ್ತಾನಿಯನ್ನು ಕೊಂದ ಬಹರೈನಿಗೆ ಜೀವಾವಧಿ ಶಿಕ್ಷೆ
ಮನಾಮ,ಮಾ. 16: ಪಾಕಿಸ್ತಾನಿಯನ್ನು ಕೊಂದ ಪ್ರಕರಣದಲ್ಲಿ ಬಹರೈನ್ನ ಪ್ರಜೆಗೆ ಹೈ ಕ್ರಿಮಿನಲ್ ರಿವಿಷನ್ ಕೋರ್ಟು ಜೀವಾವಧಿ ಶಿಕ್ಷೆವಿಧಿಸಿದೆ.
ಬಹರೈನಿ ವ್ಯಕ್ತಿ ಪಾಕಿಸ್ತಾನಿಯನ್ನು 2011ರಲ್ಲಿ ಕೊಂದು ಹಾಕಿದ್ದನು. ಪಾಕಿಸ್ತನಿ ವ್ಯಕ್ತಿ ತನ್ನ ರೂಮಿನಿಂದ ಹೊರಗೆ ಹೋಗುವಾಗ ಬಹರೈನಿ ವ್ಯಕ್ತಿ ದಾಳಿ ಮಾಡಿಕೊಂದಿದ್ದಾನೆ.ನಂತರ ಆರೋಪಿ ಪಾಕಿಸ್ತಾನಿ ವ್ಯಕ್ತಿಯ ರೂಮನ್ನು ಆಕ್ರಮಿಸಿಕೊಂಡಿದ್ದಾನೆ.
ಈ ಹಿಂದೆ ಕೆಳ ಕೋರ್ಟು ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಇದನ್ನು ಕಡಿಮೆ ಗೊಳಿಸಬೇಕೆಂದು ಆಗ್ರಹಿಸಿ ಸಲ್ಲಿಸಿದ ಅರ್ಜಿಯನ್ನು ಹೈಕ್ರಿಮಿನಲ್ ರಿವಿಷನ್ ಕೋರ್ಟು ತಳ್ಳಿಹಾಕಿ ಕೆಳ ಕೋರ್ಟಿನ ಜೀವಾವಧಿ ಶಿಕ್ಷೆ ತೀರ್ಪನ್ನು ಎತ್ತಿ ಹಿಡಿದಿದೆ.
Next Story