ಯಮನಿಗರಿಗೆ ಸೌದಿಯಿಂದ 3,800 ಕೋಟಿ ರೂ. ನೆರವು
ರಿಯಾದ್ (ಸೌದಿ ಅರೇಬಿಯ), ಎ. 3: ಸೌದಿ ಅರೇಬಿಯದ ದೊರೆ ಸಲ್ಮಾನ್ ಹೆಸರಿನಲ್ಲಿರುವ ಮಾನವೀಯ ನೆರವುಗಳ ಪರಿಹಾರ ನಿಧಿಯು ಯಮನ್ ನಾಗರಿಕರಿಗೆ 584.4 ಮಿಲಿಯ ಡಾಲರ್ (ಸುಮಾರು 3,800 ಕೋಟಿ ರೂಪಾಯಿ) ನೆರವು ನೀಡಿದೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.
ಡಾ. ಅಬ್ದುಲ್ಲಾ ಅಲ್-ರಬೀಅಹ್ ನೇತೃತ್ವದ ‘ಕಿಂಗ್ ಸಲ್ಮಾನ್ ಪರಿಹಾರ ಮತ್ತು ಮಾನವೀಯ ನೆರವು ಕೇಂದ್ರವು, ಯಮನ್ನಲ್ಲಿ ಅಗತ್ಯವುಳ್ಳವರಿಗೆ ನೆರವು ನೀಡಲು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಭಾಗೀದಾರಿಕೆಗಳನ್ನು ಏರ್ಪಡಿಸಿಕೊಳ್ಳುತ್ತಿದೆ.
Next Story