ದುಬೈ ಗುರುದ್ವಾರ : ಉಪಹಾರದಲ್ಲಿ ವಿಶ್ವದಾಖಲೆ
ದುಬೈ, ಎ. 14: ವಿವಿಧ ದೇಶಗಳ ಜನರಿಗೆ ಉಚಿತ ಬೆಳಗಿನ ಉಪಾಹಾರ ನೀಡುವುದರಲ್ಲಿ ದುಬೈಯ ಗುರುದ್ವಾರವೊಂದು ವಿಶ್ವದಾಖಲೆ ನಿರ್ಮಿಸಿದೆ.
ಜೆಬೆಲ್ ಅಲಿಯಲ್ಲಿರುವ ಗುರುದ್ವಾರ ಗುರು ನಾನಕ್ ದರ್ಬಾರ್ನಲ್ಲಿ ಒಂದು ಗಂಟೆ ಕಾಲ ನಡೆದ ಕಾರ್ಯಕ್ರಮದಲ್ಲಿ 101 ದೇಶಗಳ 600 ಜನರಿಗೆ ಬೆಳಗಿನ ಉಪಾಹಾರವನ್ನು ನೀಡಲಾಯಿತು.
‘ಬ್ರೇಕ್ಫಾಸ್ಟ್ ಫಾರ್ ಡೈವರ್ಸಿಟಿ’ ಎಂಬ ಹೆಸರಿನ ಈ ಕಾರ್ಯಕ್ರಮವು ಗಿನ್ನೆಸ್ ವಿಶ್ವದಾಖಲೆ ಪುಸ್ತಕದಲ್ಲಿ ದಾಖಲಾಯಿತು.
ಶಾಲಾಮಕ್ಕಳು, ಸರಕಾರಿ ಅಧಿಕಾರಿಗಳು ಮತ್ತು ರಾಜತಾಂತ್ರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಯುಎಇಗೆ ಭಾರತದ ರಾಯಭಾರಿ ನವದೀಪ್ ಸಿಂಗ್ ಸೂರಿ ಮುಖ್ಯ ಅತಿಥಿಯಾಗಿದ್ದರು.
Next Story