ಶಾರ್ಜಾ: ಹಡಗಿನಲ್ಲಿ ಬೆಂಕಿ; ಕಾರ್ಮಿಕ ಸಾವು
ಶಾರ್ಜಾ (ಯುಎಇ), ಮೇ 13: ಶಾರ್ಜಾದ ಹಮ್ರಿಯಾ ಬಂದರಿನಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಬೆಂಕಿ ಅಪಘಾತದಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದಾರೆ ಹಾಗೂ ನಾಲ್ವರು ಗಾಯಗೊಂಡಿದ್ದಾರೆ.
ಪನಾಮ ದೇಶದ ಧ್ವಜವನ್ನು ಹೊಂದಿರುವ ಹಡಗಿನಲ್ಲಿ ಬೆಳಗ್ಗೆ ಸುಮಾರು 5:45ಕ್ಕೆ ಬೆಂಕಿ ಹೊತ್ತಿಕೊಂಡಿತು. ಹಡಗು ಡೀಸೆಲ್ ಮತ್ತು ತೈಲೋತ್ಪನ್ನಗಳನ್ನು ಒಯ್ಯುತ್ತಿತ್ತು ಎಂದು ಬಂದರಿನ ಅಧಿಕಾರಿಗಳು ಹೇಳಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ 30 ನಿಮಿಷಗಳಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಬೆಂಕಿ ಹೊತ್ತಿಕೊಂಡ ಬಳಿಕ ಸಮುದ್ರಕ್ಕೆ ಡೀಸೆಲ್ ಸೋರಿಕೆಯಾಗುತ್ತಿದ್ದು, ಅದನ್ನೂ ನಿಲ್ಲಿಸಲಾಗಿದೆ.
Next Story