ಸೌದಿ: ಕಾರ್ಮಿಕ ಪಂಚಾಯಿತಿ ಕೇಂದ್ರ ಸ್ಥಾಪನೆ
ಜಿದ್ದಾ, ಮೇ 13: ಕಾರ್ಮಿಕ ಮಾರುಕಟ್ಟೆಯಲ್ಲಿರುವವರನ್ನು ರಕ್ಷಿಸುವ ಉದ್ದೇಶದ ಕಾರ್ಮಿಕ ಪಂಚಾಯಿತಿ ಕೇಂದ್ರ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಕಾನೂನು ಸಚಿವರ ಸಲಹಾಕಾರ ಅಬ್ದುಲ್ಲಾ ಅಲ್-ಅಬ್ದುಲ್ಲತೀಫ್ ಹೇಳಿದ್ದಾರೆ.
ಅವರು ಇತ್ತೀಚೆಗೆ ರಿಯಾದ್ನಲ್ಲಿ ನಡೆದ ಅಭಿವೃದ್ಧಿ ಮಾತುಕತೆ ವಿಚಾರಸಂಕಿರಣವೊಂದರಲ್ಲಿ ಈ ವಿಷಯವನ್ನು ಪ್ರಕಟಿಸಿದರು.
ರಾಷ್ಟ್ರೀಯ ಪರಿವರ್ತನೆ ಕಾರ್ಯಕ್ರಮ (ಎನ್ಟಿಪಿ) 2020 ಮತ್ತು ಮುನ್ನೋಟ 2030ರ ಭಾಗವಾಗಿ ಆಧುನಿಕ ಕಾರ್ಮಿಕ ನ್ಯಾಯಾಲಯವೊಂದನ್ನು ಸ್ಥಾಪಿಸಲು ಕಾನೂನು ಸಚಿವಾಲಯ ಯೋಜನೆ ರೂಪಿಸಿದೆ ಎಂದು ಅವರು ಈ ಸಂದರ್ಭದಲ್ಲಿ ಘೋಷಿಸಿದರು.
Next Story