ಬೈಶ್ ಸ್ಪೋರ್ಟ್ಸ್ ಕ್ಲಬ್: ಚಾಂಪಿಯನ್ಸ್ ಟ್ರೋಫಿ 2017 ಸಮಾರೋಪ
ಜಿಝಾನ್, ಮೇ 14: ಬೈಶ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸೌದಿ ಅರೇಬಿಯಾದ ಬೇಯ್ಶ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2017 ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭ ರಾಮಿ ಕ್ರೀಡಾಂಗಣದಲ್ಲಿ ನಡೆಯಿತು
ಪಂದ್ಯಾಟದಲ್ಲಿ 16 ತಂಡಗಳು ಭಾಗವಹಿಸಿದ್ದು, ಬಿನ್ ಫಹದ್ ತಂಡವು ಎಸ್.ಕೆ. ಸ್ಟ್ರೈಕರ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು, ಬಿನ್ ಫಹದ್ ತಂಡದ ನಜೀಬ್ ಕಾಟಿಪಳ್ಳ ಪಂದ್ಯಶ್ರೇಷ್ಠರಾಗಿ, ನೌಶಾದ್ ಕಲಂದರ್ ಕರ್ನಿರೆ ಸರಣಿ ಶ್ರೇಷ್ಠರಾಗಿ, ಉತ್ತಮ ದಾಂಡಿಗರಾಗಿ ಶಫೀಕ್ ಹಾಗೂ ಉತ್ತಮ ಬೌಲರ್ ಪ್ರಶಸ್ತಿಯನ್ನು ನಜೀಬ್ ತಮ್ಮದಾಗಿಸಿಕೊಂಡರು.
ಸಮಾರೋಪ ಸಮಾರಂಭದಲ್ಲಿ ಅವುಫ್ ಕೃಷ್ಣಾಪುರ, ಕವಿರಾಜ್ ಸಿಸ್ಕೋ, ತನ್ವೀರ್ ಕೃಷ್ಣಾಪುರ, ಝಿಯಾದ್ ಕೃಷ್ಣಾಪುರ ಅಜ್ಮಾನ್ ಸಾಗರ, ಮುಕ್ತಾರ್ ಪಡುಬಿದ್ರಿ, ಮತ್ತು ಅರ್ಷದ್ ಪಡುಬಿದ್ರಿ ಉಪಸ್ಥಿತರಿದ್ದರು.
ಮೆಹಬೂಬ್ ಮಡಿಕೇರಿ, ಸಿದ್ದಿಕ್ ಬುಲೆಟ್ , ನೌಫಾಲ್ ಕಂಚಿನಡ್ಕ ತೀರ್ಪುಗಾರರಾಗಿ ಭಾಗವಹಿಸಿದ್ದರು. ಕ್ರೀಡಾಕೂಟದ ಯಶಸ್ಸಿಗಾಗಿ ಸಾಬಿಹ್ ದೇರಳಕಟ್ಟೆ, ಝಹೀರ್ ಉಡುಪಿ, ಸಫ್ವಾನ್ ಕೃಷ್ಣಾಪುರ, ನವಾಝ್ ಶಾಕೊ, ರೋಮನ್ ಚಿಕ್ಕಮಗಳೂರು ಸಹಕರಿಸಿದರು.
ನವಾಝ್ ಕಂಚಿನಡ್ಕ ಕಾರ್ಯಕ್ರಮ ನಿರೂಪಿಸಿದರು.