ಬ್ಯಾರೀಸ್ ವೆಲ್ಫೇರ್ ಫೋರಂ ಅಧ್ಯಕ್ಷರಾಗಿ ಮುಹಮ್ಮದ್ ಅಲಿ ಉಚ್ಚಿಲ್ ಪುನರಾಯ್ಕೆ
ಅಬುಧಾಬಿ, ಮೇ 14: ಸಾಮಾಜಿಕ ಸಂಘಟನೆಯಾದ ಬ್ಯಾರೀಸ್ ವೆಲ್ಫೇರ್ ಫೋರಂನ ನೂತನ ಕಾರ್ಯನಿರ್ವಾಹಕ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಮುಹಮ್ಮದ್ ಅಲಿ ಉಚ್ಚಿಲ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ಲಾ ಮದುಮೂಲೆ, ಖಜಾಂಚಿಯಾಗಿ ಮುಹಮ್ಮದ್ ಸಿದ್ದೀಕ್, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ರಫೀಕ್ ಕೃಷ್ಣಾಪುರ ಹಾಗೂ ಅಬ್ದುರ್ರವೂಫ್ ದರ್ಖಾಸ್, ಮುಖ್ಯ ಸಲಹೆಗಾರರಾಗಿ ಅಬ್ದುಲ್ ಬಶೀರ್ ಹಸನ್ ಬಜ್ಪೆ, ಅಬೂಬಕರ್ ಸಿದ್ದೀಕ್ ಉಚ್ಚಿಲ್, ಸಲಹೆಗಾರರಾಗಿ ಮುಹಮ್ಮದ್ ಕಲ್ಲಾಪು, ಮುಹಮ್ಮದ್ ಹನೀಫ್ ಉಳ್ಳಾಲ್, ನಝೀರ್ ಉಬಾರ್, ಸಮನ್ವಯಕಾರರಾಗಿ ಇಮ್ರಾನ್ ಅಹ್ಮದ್ ಅಬ್ದುಲ್ಲಾ, ಲೆಕ್ಕ ಪರಿಶೋಧಕರಾಗಿ ಅಬ್ದುಲ್ ಮಜೀದ್ ಎ.ಜಿ., ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಗುರುಪುರ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಜಲೀಲ್ ಜಿ.ಎಚ್., ಜಂಟಿ ಖಜಾಂಚಿಗಳಾಗಿ ಅಬ್ದುಲ್ ಮಜೀದ್ ಆತೂರು, ಮೊಯೀನುದ್ದೀನ್ ಹಂಡೇಲ್, ಜಂಟಿ ಸಮನ್ವಯಕಾರರಾಗಿ ಅಹ್ಮದ್ ನವಾಝ್ ಉಚ್ಚಿಲ್ ಹಾಗೂ ಅಬ್ದುಲ್ ರಶೀದ್ ವಿ.ಕೆ., ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ ಹಂಝ ಅಬ್ದುಲ್ ಖಾದರ್, ಅಬ್ದುಲ್ ರಶೀದ್ ಬಿಜೈ, ಅಬ್ದುಲ್ ಸಲೀಂ, ಅಬೂಬಕರ್ ಉಬಾರ್, ಅಲ್ತಾಫ್ ತಕ್ರೀರ್ ಹಾಗೂ ಅಬ್ದುಲ್ ಮುಜೀಬ್ ಆಯ್ಕೆಯಾದರು.