ಸೌದಿ: 66.5 ಶೇ. ವೈದ್ಯರು ವಿದೇಶೀಯರು
ಜಿದ್ದಾ, ಮೇ 17: ಸೌದಿ ಅರೇಬಿಯದ ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ 42,768 ವೈದ್ಯರ ಪೈಕಿ 66.5 ಶೇಕಡ ಮಂದಿ ವಿದೇಶೀಯರು ಎಂದು 2016ರ ಸಮೀಕ್ಷೆಯೊಂದು ತಿಳಿಸಿದೆ.
ದೇಶದಲ್ಲಿ ಒಟ್ಟು 28,464 ವಿದೇಶಿ ವೈದ್ಯರು ಮತ್ತು 14,304 ದೇಶಿ ವೈದ್ಯರಿದ್ದಾರೆ.
ದೇಶದಲ್ಲಿ ಒಟ್ಟು 1,01,256 ಪುರುಷ ಮತ್ತು ಮಹಿಳಾ ನರ್ಸ್ಗಳಿದ್ದಾರೆ. ಈ ಪೈಕಿ 57.5 ಶೇಕಡ ನರ್ಸ್ಗಳು, ಅಂದರೆ 58,274 ನರ್ಸ್ಗಳು ಸೌದಿಗಳಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
Next Story