ಮದೀನಾದಲ್ಲಿ ಶಿಕ್ಷಣ ಅಕಾಡಮಿ ಸ್ಥಾಪನೆಗೆ ಯೋಜನೆ
ರಿಯಾದ್, ಜೂ. 3: ಮದೀನಾ ಗವರ್ನರ್ ರಾಜಕುಮಾರ ಫೈಸಲ್ ಬಿನ್ ಸಲ್ಮಾನ್ರ ಆಶ್ರಯದಲ್ಲಿ ಪವಿತ್ರ ನಗರ ಮದೀನಾದಲ್ಲಿ 20 ಮಿಲಿಯ ಸೌದಿ ರಿಯಾಲ್ (ಸುಮಾರು 34 ಕೋಟಿ ರೂಪಾಯಿ) ವೆಚ್ಚದಲ್ಲಿ ಎಂಎಡಿಎಸಿ ಶಿಕ್ಷಣ ಅಕಾಡಮಿಯನ್ನು ಸ್ಥಾಪಿಸಲಾಗುವುದು.
ಸೌದಿ ಕಂಪೆನಿ ಎಸ್ಎಬಿಐಸಿಯ ಬೆಂಬಲದೊಂದಿಗೆ ಅಕಾಡಮಿಯನ್ನು ಸ್ಥಾಪಿಸುವ ಒಪ್ಪಂದವೊಂದಕ್ಕೆ ಇತ್ತೀಚೆಗೆ ಸಹಿ ಹಾಕಲಾಯಿತು.
ಸಹಿ ಹಾಕುವ ಕಾರ್ಯಕ್ರಮದಲ್ಲಿ ಜುಬೈಲ್ ಮತ್ತು ಯಂಬು ರಾಯಲ್ ಕಮಿಶನ್ನ ಅಧ್ಯಕ್ಷ ಹಾಗೂ ಎಸ್ಎಬಿಐಸಿ ಅಧ್ಯಕ್ಷ ರಾಜಕುಮಾರ ಸೌದ್ ಬಿನ್ ಅಬ್ದುಲ್ಲಾ ಬಿನ್ ತೆನ್ಯನ್ ಅಲ್ ಸೌದ್ ಉಪಸ್ಥಿತರಿದ್ದರು.
Next Story