ಕತರ್ ಏರ್ ವೇಸ್ ವಿಮಾನಗಳ ಮೇಲಿನ ನಿರ್ಬಂಧ ತೆರವು
ವಾಶಿಂಗ್ಟನ್, ಜು. 6: ಅಮೆರಿಕದ ಅಧಿಕಾರಿಗಳು ಕತರ್ ಏರ್ವೇಸ್ ವಿಮಾನಗಳ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆರವುಗೊಳಿಸಿದ್ದು, ಅಮೆರಿಕಕ್ಕೆ ಹೋಗುವ ಈ ವಿಮಾನಗಳ ಪ್ರಯಾಣಿಕರು ತಮ್ಮೊಂದಿಗೆ ಲ್ಯಾಪ್ಟಾಪ್ಗಳು ಮತ್ತು ಇತರ ಇಲೆಕ್ಟ್ರಾನಿಕ್ ವಸ್ತುಗಳನ್ನು ಒಯ್ಯಬಹುದಾಗಿದೆ.
ಕತರ್ ಏರ್ವೇಸ್ ಈ ವಾರ ಅಮೆರಿಕದ ನಿರ್ಬಂಧಗಳಿಂದ ಮುಕ್ತಿಗೊಂಡ ನಾಲ್ಕನೆ ವಿಮಾನಯಾನ ಸಂಸ್ಥೆಯಾಗಿದೆ. ಎಮಿರೇಟ್ಸ್, ಎತಿಹಾದ್ ಏರ್ವೇಸ್ ಮತ್ತು ಟರ್ಕಿಶ್ ಏರ್ಲೈನ್ಸ್ ವಿಮಾನಗಳ ಮೇಲಿನ ನಿರ್ಬಂಧಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ.
Next Story