ಸೌದಿ ಕ್ಲಿನಿಕ್ಗಳಿಂದ 3,464 ಸಿರಿಯ ನಿರಾಶ್ರಿತರಿಗೆ ಚಿಕಿತ್ಸೆ
ಜಿದ್ದಾ (ಸೌದಿ ಅರೇಬಿಯ), ಜು. 8: ಉತ್ತರ ಜೋರ್ಡಾನ್ನ ಝಾಟಾರಿ ಶಿಬಿರದಲ್ಲಿ ಪರಿಣತ ಸೌದಿ ಕ್ಲಿನಿಕ್ಗಳು 3,464 ಸಿರಿಯ ನಿರಾಶ್ರಿತರಿಗೆ ಕಳೆದ ವಾರ ಚಿಕಿತ್ಸೆ ನೀಡಿವೆ.
ರೋಗಗಳ ವಿರುದ್ಧ ಹೋರಾಡುವುದು ಮತ್ತು ಸಾರ್ವಜನಿಕ ಆರೋಗ್ಯ ಮಟ್ಟವನ್ನು ಎತ್ತರಿಸುವುದು ಅಭಿಯಾನದ ಅತ್ಯಂತ ಮಹತ್ವದ ಯೋಜನೆಗಳಾಗಿವೆ ಎಂದು ಸೌದಿ ನ್ಯಾಶನಲ್ ಕ್ಯಾಂಪೇನ್ನ ಪ್ರಾದೇಶಿಕ ನಿರ್ದೇಶಕ ಡಾ. ಬದರ್ ಬಿನ್ ಅಬ್ದುಲ್ ರಹಮಾನ್ ಅಲ್-ಸಮ್ಹಾನ್ ಹೇಳಿದರು ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.
ಸುಧಾರಿತ ಉಪಕರಣಗಳು ಮತ್ತು ಉತ್ತಮ ತರಬೇತಿ ಪಡೆದ ಸಿಬ್ಬಂದಿ ಮೂಲಕ ಕಠಿಣ ಹಾಗೂ ತುರ್ತು ಪ್ರಕರಣಗಳನ್ನು ನಿಭಾಯಿಸಲು ಸಾಧ್ಯ ಎನ್ನುವುದನ್ನು ಸಂಘಟನೆ ತೋರಿಸಿಕೊಟ್ಟಿದೆ ಎಂದು ಏಜನ್ಸಿ ಹೇಳಿದೆ.
Next Story