ಮಧ್ಯಪ್ರಾಚ್ಯದ ಮೇಲಿನ ಲ್ಯಾಪ್ಟಾಪ್ ನಿಷೇಧ ಹಿಂದಕ್ಕೆ
ರಿಯಾದ್, ಜು. 20: ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕದ ಕೆಲವು ವಿಮಾನ ನಿಲ್ದಾಣಗಳಿಂದ ಅಮೆರಿಕಕ್ಕೆ ಹೋಗುವ ವಿಮಾನಗಳಲ್ಲಿ ಪ್ರಯಾಣಿಕರು ಲ್ಯಾಪ್ಟಾಪ್ಗಳನ್ನು ಒಯ್ಯುವುದಕ್ಕೆ ವಿಧಿಸಲಾಗಿದ್ದ ನಾಲ್ಕು ತಿಂಗಳ ನಿಷೇಧವನ್ನು ಅಮೆರಿಕ ಹಿಂದಕ್ಕೆ ಪಡೆದುಕೊಂಡಿದೆ.
ನಿಷೇಧ ವ್ಯಾಪ್ತಿಯಿಂದ ಹೊರಬಂದ 10 ವಿಮಾನ ನಿಲ್ದಾಣಗಳ ಪೈಕಿ ಸೌದಿ ಅರೇಬಿಯದ ದೊರೆ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೊನೆಯದಾಗಿದೆ ಎಂಬುದಾಗಿ ಅಮೆರಿಕದ ಆಂತರಿಕ ಭದ್ರತೆ ಇಲಾಖೆಯು ಬುಧವಾರ ಮಾಡಿದ ಟ್ವೀಟ್ ಖಚಿತಪಡಿಸಿದೆ.
Next Story