ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೌದಿ ಪೊಲೀಸರು
ಸೌದಿ ಅರೇಬಿಯಾ, ಜು.22: ಖಾತಿಫ್ ನ ಸೈಹಾತ್ ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಮೂವರು ಭಯೋತ್ಪಾದಕರನ್ನು ಸೌದಿ ಅರೇಬಿಯಾ ಪೊಲೀಸರು ಹೊಡೆದುರುಳಿಸಿದ್ದಾರೆ.
ಇಬ್ಬರು ಸೌದಿ ಹಾಗೂ ಓರ್ವ ಬಹ್ರೈನ್ ಮೂಲದ ಶಂಕಿತ ಉಗ್ರರು ಪೊಲೀಸರ ವಿರುದ್ಧ ಈ ಹಿಂದೆ ದಾಳಿ ನಡೆಸಿದ್ದರು ಎನ್ನಲಾಗಿದೆ. ಘಟನಾ ಸ್ಥಳದಿಂದ ಮೂರು ಮೆಷಿನ್ ಗನ್ ಗಳು, ಒಂದು ಪಿಸ್ತೂಲ್, 10 ಕಿಲೋಗೂ ಅಧಿಕ ತೂಕದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
Next Story