104 ವರ್ಷದ ಹಜ್ ಯಾತ್ರಿ
ರಿಯಾದ್, ಆ. 17: ಇಂಡೋನೇಶ್ಯದ 104 ವರ್ಷ ಪ್ರಾಯದ ಮಹಿಳೆ ಬೇಗ್ ಮರಿಯಾ ಹಜ್ ಯಾತ್ರೆಗಾಗಿ ಜಿದ್ದಾ ತಲುಪಿದ್ದಾರೆ. ಅವರು ಇಂಡೋನೇಶ್ಯದಿಂದ ಹಜ್ಗೆ ಬರುವ 2.21 ಲಕ್ಷ ಯಾತ್ರಿಕರ ಪೈಕಿ ಎಲ್ಲರಿಗಿಂತ ಹಿರಿಯರು.
ಮರಿಯಾ ಉತ್ತಮ ಆರೋಗ್ಯವನ್ನು ಹೊಂದಿದ್ದಾರೆ ಹಾಗೂ ಹಜ್ ಪ್ರಕ್ರಿಯೆಗಳನ್ನು ಯಾವುದೇ ಸಮಸ್ಯೆಗಳಿಲ್ಲದೆ ನಿರ್ವಹಿಸಲು ಸಮರ್ಥರಾಗಿದ್ದಾರೆ ಎಂದು ಜಿದ್ದಾದಲ್ಲಿರುವ ಇಂಡೋನೇಶ್ಯನ್ ಕಾನ್ಸುಲೇಟ್ನಲ್ಲಿ ಕಾನ್ಸುಲ್ ಜನರಲ್ ಆಗಿರುವ ಮುಹಮ್ಮದ್ ಹೇರಿ ಸರ್ಫುದ್ದೀನ್ ‘ಅರಬ್ ನ್ಯೂಸ್’ಗೆ ತಿಳಿಸಿದರು.
Next Story