ಮಕ್ಕಾ ಹೊಟೇಲ್ನಲ್ಲಿ ಬೆಂಕಿ: ಅತಿಥಿಗಳ ತೆರವು
ರಿಯಾದ್, ಆ. 21: ಸೌದಿ ಅರೇಬಿಯದ ಮಕ್ಕಾ ನಗರದ ಹೊಟೇಲೊಂದರಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲಿದ್ದ ಅತಿಥಿಗಳನ್ನು ತೆರವುಗೊಳಿಸಲಾಗಿದೆ ಎಂದು ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ.
ಮಕ್ಕಾದ ಅಝಾರಿಯಾ ಜಿಲ್ಲೆಯ ಹೊಟೇಲೊಂದರ ಎಂಟನೆ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದಾಗ್ಯೂ, ಯಾರೂ ಗಾಯಗೊಂಡಿಲ್ಲ ಎಂದು ನಾಗರಿಕ ರಕ್ಷಣಾ ಇಲಾಖೆಯ ವಕ್ತಾರ ನಯೀಫ್ ಅಲ್-ಶರೀಫ್ ಹೇಳಿದರು.
ಹವಾನಿಯಂತ್ರಣ ವ್ಯವಸ್ಥೆಯ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
Next Story