ರಕ್ಷಣೆಗಾಗಿ ‘ಹಾರುವ ಬೈಕ್’ನಲ್ಲಿ ಆಗಮಿಸುತ್ತಾರೆ ದುಬೈ ಪೊಲೀಸರು!
ತುರ್ತು ಸಂದರ್ಭಗಳಲ್ಲಿ ಚಿಂತೆ ಬೇಡ
ದುಬೈ, ಅ.12: ಸಾಮಾನ್ಯವಾಗಿ ಪೊಲೀಸರು ಕಾರುಗಳಲ್ಲಿ, ಜೀಪ್ ಗಳಲ್ಲಿ ಹಾಗು ಬೈಕ್ ಗಳಲ್ಲಿ ಹೋಗುವುದನ್ನು ನೋಡಿದ್ದೇವೆ. ಆದರೆ ದುಬೈ ಪೊಲೀಸರು ಇವೆಲ್ಲದಕ್ಕಿಂತ ಭಿನ್ನವಾಗಿ ಹಾರುವ ಮೋಟಾರ್ ಬೈಕ್ ನಲ್ಲಿ ಸುತ್ತುವ ಮೂಲಕ ಗಮನಸೆಳೆದಿದ್ದಾರೆ.
ಈ ‘ಹೋವರ್ ಬೈಕ್’’ನಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಸುತ್ತುವ ವಿಡಿಯೋವೊಂದು ವೈರಲ್ ಆಗುತ್ತಿದೆ. ರಷ್ಯಾದ ‘ಹೋವರ್ ಸರ್ಫ್’’ ಕಂಪೆನಿ ತಯಾರಿಸಿರುವ ಈ ಹಾರುವ ಬೈಕ್ ನೆಲದಿಂದ 16 ಅಡಿ ಎತ್ತರಕ್ಕೆ ಹಾರಲಿದೆ. ಸುಮಾರು 25 ನಿಮಿಷಗಳ ಕಾಲ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಈ ವಿಶೇಷ ಬೈಕ್ ಗಳನ್ನು ತುರ್ತು ಸಂದರ್ಭಗಳಲ್ಲಿ ಕ್ಷಿಪ್ರ ಕಾರ್ಯಾಚರಣೆಗಾಗಿ ಬಳಸಲಾಗುತ್ತದೆ.
Next Story