ನ. 24ರಂದು ಮಾದಕ ಮುಕ್ತ ಮಂಗಳೂರು ಯುವಜನ ಜಾಗೃತಿ ಆಂದೋಲನ
ಮಂಗಳೂರು, ನ. 23: ಡಿವೈಎಫ್ಐ ವತಿಯಿಂದ ನ. 24ರಂದು ಸಂಜೆ 6 ಗಂಟೆಗೆ ಪಕ್ಕಲಡ್ಕ ಭಜನಾ ಮಂದಿರದ ಬಳಿ ಮಾದಕ ಮುಕ್ತ ಮಂಗಳೂರು ಯುವಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಮಾದಕ ವಸ್ತುಗಳ ದುಷ್ಪರಿಣಾಮಗಳು, ಅದರಿಂದ ಕುಟುಂಬ, ಸಮಾಜದ ನೆಮ್ಮದಿ ಕೆಡುವುದರ ವಿರುದ್ಧ ಡಿವೈಎಫ್ಐ ದ.ಕ ಜಿಲ್ಲಾದ್ಯಂತ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬಜಾಲ್, ಜಪ್ಪಿನಮೊಗರು, ಜಲ್ಲಿಗುಡ್ಡೆ, ಫೈಸಲ್ ನಗರ ಸುತ್ತಮುತ್ತಲ ಪ್ರದೇಶದಲ್ಲಿ ದಿನೇ ದಿನೇ ನಿಷೇಧಿತ ಮಾದಕ ವಸ್ತುಗಳ ಹಾವಳಿ ವ್ಯಾಪಕವಾಗಿ ಹಬ್ಬುತ್ತಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story