ಸಲ್-ಸಬೀಲ್ ಸ್ಟೂಡೆಂಟ್ಸ್ ಎಸೋಸಿಯೇಶನ್ ಅಧ್ಯಕ್ಷರಾಗಿ ಉಮರ್ ಸಾಬೀತ್ ಬೋಗೊಡಿ ಆಯ್ಕೆ
ಸಾಬಿತ್, ಉಬೈದ್, ರಾಫಿದ್
ವಿಟ್ಲ, ಡಿ.11: ಪಾಣೆಮಂಗಳೂರು ಸಮೀಪದ ಬೋಗೋಡಿ ಸಲ್-ಸಬೀಲ್ ಸ್ಟೂಡೆಂಟ್ಸ್ ಎಸೋಸಿಯೇಶನ್ ಇದರ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಉಮ್ಮರ್ ಸಾಬಿತ್ ಬೋಗೋಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉಬೈದ್ ಬೋಗೋಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಕಛೇರಿಯಲ್ಲಿ ಇತ್ತೀಚೆಗೆ ನಡೆದ 4ನೇ ವರ್ಷದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಉಪಾಧ್ಯಕ್ಷರಾಗಿ ನಜೀಬ್ ಬೋಗೋಡಿ, ಜೊತೆ ಕಾರ್ಯದರ್ಶಿಯಾಗಿ ಸಾದಾತ್ ಆಲಡ್ಕ, ಕೋಶಾಧಿಕಾರಿಯಾಗಿ ರಾಫಿದ್ ಬೋಗೋಡಿ ಅವರು ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೈಫ್ ಬೋಗೋಡಿ, ಸಿದ್ದೀಕ್ ಬಂಗ್ಲೆಗುಡ್ಡೆ, ರಾಶಿದ್ ಬೋಗೊಡಿ, ಜಮಾಲ್ ಬಂಗ್ಲೆಗುಡ್ಡೆ ರಾಬಿ ಆಲಡ್ಕ, ಆಸೀರ್ ಆಲಡ್ಕ ಅವರನ್ನು ನೇಮಿಸಲಾಯಿತು.
Next Story