ಕಾರು ಢಿಕ್ಕಿ: ಯುವತಿ ಮೃತ್ಯು
ಕಾಪು, ಡಿ.13: ಕಾರೊಂದು ಢಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡ ಯುವತಿಯೊಬ್ಬರು ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಪಾಂಗಾಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಿನ್ನೆ ರಾತ್ರಿ ನಡೆದಿದೆ.
ಮೃತರನ್ನು ಪಾಂಗಾಳದ ಪ್ರಕಾಶ್ ಸೋನ್ಸ್ ಎಂಬವರ ಪುತ್ರಿ ಸುಪ್ರಿಯಾ ಡಾಲಿ ಎಂದು ಗುರುತಿಸಲಾಗಿದೆ. ಇವರು ಸಂಜೆ 7 ಗಂಟೆ ಸುಮಾರಿಗೆ ಹೆದ್ದಾರಿಗೆ ಸಮೀಪ ರಸ್ತೆ ದಾಟಲೆಂದು ಮಣ್ಣಿನ ರಸ್ತೆಯಲ್ಲಿ ನಿಂತಿದ್ದಾಗ, ಉಡುಪಿ ಕಡೆಯಿಂದ ಅತಿವೇಗವಾಗಿ ಧಾವಿಸಿ ಬಂದ ಕಾರಿನ ಚಾಲಕ ಕಾರನ್ನು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಅಲ್ಲಿ ನಿಂತಿದ್ದ ಡಾಲಿ ಅವರಿಗೆ ಡಿಕ್ಕಿ ಹೊಡೆದಿತ್ತು.
ಇದರಿಂದ ತೀವ್ರವಾಗಿ ಗಾಯಗೊಂಡ ಅವರನ್ನು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 8 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story