ಸಾಧಕರಿಗೆ ಸನ್ಮಾನ: ಮಾಹಿತಿ ನೀಡಲು ಸೂಚನೆ
ಮಂಗಳೂರು, ಡಿ.26: ಮಂಗಳೂರು ಪ್ರೆಸ್ಕ್ಲಬ್ ದಿನಾಚರಣೆಯು 2018ರ ಜ. 6ರಂದು ಬೆಳಗ್ಗೆ 10:30ಕ್ಕೆ ಉರ್ವ ಚರ್ಚ್ ಸಭಾಂಗಣ ನಡೆಯಲಿದೆ. ಈ ಸಂದರ್ಭ 2016ರ ಡಿ.1ರಿಂದ 2017ರ ನ.30ರವರೆಗೆ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ ಕಾರ್ಯನಿರತ ಪತ್ರಕರ್ತರನ್ನು ಸನ್ಮಾನಿಸಲು ಉದ್ದೇಶಿಸಲಾಗಿದೆ.
ಸಾಧಕ ಪತ್ರಕರ್ತರು/ ಪತ್ರಿಕಾ ಛಾಯಾಗ್ರಾಹಕರು 2018ರ ಜ.2ರ ಸಂಜೆ 4 ಗಂಟೆಯ ಒಳಗಾಗಿ ಪ್ರೆಸ್ಕ್ಲಬ್ಗೆ ವಿವರ ನೀಡಲು (ಹೆಚ್ಚಿನ ಮಾಹಿತಿಗಾಗಿ ಪ್ರೆಸ್ಕ್ಲಬ್-ದೂ.ಸಂ:0824-2450111) ಅಧ್ಯಕ್ಷ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಸೂಚಿಸಿದ್ದಾರೆ.
Next Story