ಕಡಬ: ದ್ವಿಚಕ್ರ ವಾಹನಕ್ಕೆ ಜೀಪ್ ಢಿಕ್ಕಿ
ಮಹಿಳೆಗೆ ಗಂಭೀರ ಗಾಯ
ಕಡಬ, ಫೆ.15. ಜೀಪೊಂದು ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಕಡಬದ ಹಳೇಸ್ಟೇಷನ್ ಎಚ್.ಪಿ. ಪೆಟ್ರೋಲ್ ಬಂಕ್ ಸಮೀಪ ಗುರುವಾರ ನಡೆದಿದೆ.
ಕಡಬದಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಬಂದ ಜೀಪ್ ಢಿಕ್ಕಿ ಹೊಡೆದುದರಿಂದ ದ್ವಿಚಕ್ರ ವಾಹನ ಸವಾರ ಲಿಂಗಪ್ಪ ಪೂಜಾರಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಸಹ ಸವಾರೆ ಲಿಂಗಪ್ಪ ಪೂಜಾರಿ ಅವರ ಪತ್ನಿ ಸುಜಾತಾ (43) ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
Next Story