ಮಂಗಳೂರಿನ ಝೀಶಾನ್ ರಮ್ಲಾನ್ ಗೆ ಪ್ರತಿಷ್ಠಿತ 'ಟಾಪ್ 100 ಗ್ಲೋಬಲ್ ಎಚ್ಆರ್ ಡೈವರ್ಸಿಟಿ ಲೀಡರ್' ಪ್ರಶಸ್ತಿ
ಮಂಗಳೂರು, ಫೆ.22: 'ವರ್ಲ್ಡ್ ಎಚ್ಆರ್ಡಿ ಕಾಂಗ್ರೆಸ್' ಕೊಡಮಾಡುವ 'ಟಾಪ್ 100 ಗ್ಲೋಬಲ್ ಎಚ್ಆರ್ ಡೈವರ್ಸಿಟಿ ಲೀಡರ್ ಪ್ರಶಸ್ತಿ'ಯನ್ನು ಮಂಗಳೂರಿನ ಝೀಶಾನ್ ರಮ್ಲಾನ್ ಗಳಿಸಿದ್ದಾರೆ. ಮುಂಬೈಯಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಝೀಶಾನ್ ಅವರು ಪ್ರಸಕ್ತ ಇಂಟ್ಯೂಟ್ ಇಂಡಿಯಾ ಇದರ ಎಂಗೇಜ್ಮೆಂಟ್, ಡೈವರ್ಸಿಟಿ ಹಾಗೂ ಸಿಎಸ್ಆರ್ ಮುಖ್ಯಸ್ಥರಾಗಿದ್ದಾರೆ. ಭಿನ್ನ ಸಾಮರ್ಥ್ಯದ ಅರ್ಹರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವ ಹಾಗೂ ಗ್ರಾಮೀಣ ಪ್ರದೇಶದ ಬಾಲಕಿಯರಿಗೆ ಪ್ರೋತ್ಸಾಹ ನೀಡುವ ಅವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಝೀಶಾನ್ ಅವರು ಮಂಗಳೂರಿನ ರಮ್ಲಾನ್ಸ್ ಚಾರಿಟೇಬಲ್ ಟ್ರಸ್ಟ್ ಇದರ ನಿರ್ವಾಹಕರೂ ಆಗಿದ್ದಾರೆ. ದಿವಂಗತ ವಿ. ರಮ್ಲಾನ್ ಹಾಜಿ ಅವರ ಮೊಮ್ಮಗನಾಗಿರುವ ಝೀಶಾನ್, ಬಿ.ಶಮೀಮ್ ರಮ್ಲನ್ ಹಾಗೂ ಉಷ್ಮಾ ರಮ್ಲಾನ್ ದಂಪತಿಯ ಪುತ್ರ.
Next Story