ಫೆ. 25: ಫಾ. ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ರಜತ ಮಹೋತ್ಸವ ಆಚರಣೆ
ಮಂಗಳೂರು, ಫೆ. 24: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಸಾಮಾನ್ಯ ಶಸ್ತ್ರಚಿಕಿತ್ಸೆ ವಿಭಾಗವು ಫೆಬ್ರವರಿ 25ರಂದು ಶಸ್ತ್ರಚಿಕಿತ್ಸಾ ಶಿಕ್ಷಣ ಮುಂದುವರಿಕೆ-2018 ಮತ್ತು ಸ್ನಾತಕೋತ್ತರ ಪದವಿಯ ರಜತ ಮಹೋತ್ಸವವನ್ನು ಆಚರಿಸಲಿದೆ.
ಈ ಕಾರ್ಯಕ್ರಮವು ಮಂಗಳೂರಿನಲ್ಲಿರುವ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಜ್ಞಾನಕೇಂದ್ರದ ದಶಮಾನ ಸ್ಮಾರಕ ಭವನದಲ್ಲಿ ಬೆಳಿಗ್ಗೆ 9 ಗಂಟೆ ಯಿಂದ ಮಧ್ಯಾಹ್ನ ಒಂದು ಗಟೆಯವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಫಾ. ಮುಲ್ಲರ್ ಕಾಲೇಜಿನ ಹಿರಿಯ ಶಸ್ತ್ರಚಿಕಿತ್ಸಕರು ಮತ್ತು ವಿಭಾಗದ ಮಾಜಿ ಮುಖ್ಯಸ್ಥರನ್ನು ಸನ್ಮಾನಿಸಲಾಗುವುದು.
Next Story