ಮಂಗಳೂರು ವಿವಿ. ಅಂತರ್ ಕಾಲೇಜ್ ಮಹಿಳೆಯರ ಕಬ್ಬಡ್ಡಿ
ಆಳ್ವಾಸ್ ಕಾಲೇಜಿಗೆ ಸತತ 11ನೇ ಬಾರಿ ಪ್ರಶಸ್ತಿ
ಮೂಡುಬಿದಿರೆ, ಮಾ.14: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಮಹಿಳೆಯರ ಕಬ್ಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ಮೂಡುಬಿದಿರೆ ತಂಡವು ಎಸ್.ಡಿ.ಎಮ್ ಕಾಲೇಜು ಉಜಿರೆ ತಂಡವನ್ನು ಮಣಿಸುವುದರೊಂದಿಗೆ ಸತತ 11ನೇ ಬಾರಿಗೆ ಫಿಲೋಮಿನಾ ಪತ್ರವೊ ಮೆಮೊರಿಯಲ್' ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿದೆ.
ಸೆಮಿಫೈನಲ್ನಲ್ಲಿ ಆಳ್ವಾಸ್ ತಂಡವು ಮಂಗಳೂರು ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಮತ್ತು ಎಸ್ಡಿಎಮ್ ಕಾಲೇಜು ತಂಡವು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಮೂಡುಬಿದಿರೆ ತಂಡವನ್ನು ಮಣಿಸಿ ಫೈನಲ್ ಹಂತಕ್ಕೆ ತೇರ್ಗಡೆ ಹೊಂದಿದ್ದವು.
ಆಳ್ವಾಸ್ ತಂಡದ ಇಂಚರ.ಕೆ.ಶೆಟ್ಟಿ ಉತ್ತಮ ಹಿಡಿತಗಾರ್ತಿ, ಮಂಗಳೂರು ರಥಬೀದಿ ಕಾಲೇಜಿನ ತೇಜಶ್ರೀ ಉತ್ತಮ ದಾಳಿಗಾರ್ತಿ, ಎಸ್.ಡಿ.ಎಮ್ ಕಾಲೇಜಿನ ತೃಪ್ತಿ.ಪಿ.ಜಿ ಯವರು ಸರ್ವಾಂಗಣ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು.
Next Story