ಎ.28-30: ಪುತ್ತೂರಿನಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿ
ಪುತ್ತೂರು,ಎ.3: ಬ್ಯಾಡ್ಮಿಂಟನ್ ಅಕಾಡಮಿ ಪುತ್ತೂರು ವತಿಯಿಂದ 16 ವರ್ಷ ಒಳಗಿನ ಬಾಲಕ ಮತ್ತು ಬಾಲಕಿಯರಿಗೆ ಎ.28ರಿಂದ 30ರ ತನಕ ಪುತ್ತೂರಿನ ಸುದಾನ ಸ್ಪೋಟ್ಸ್ ಕ್ಲಬ್ನಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಅಕಾಡಮಿ ಅಧ್ಯಕ್ಷ ಪಿ.ಜಿ. ವೆಂಕಟ್ರಾಜ್ ತಿಳಿಸಿದ್ದಾರೆ.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸುಳ್ಯ, ಪುತ್ತೂರು, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕು ವ್ಯಾಪ್ತಿಯ ಬಾಲಕ ಬಾಲಕರಿಗೆ 6 ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದೆ. 11, 13 ವರ್ಷದ ಮಕ್ಕಳಿಗೆ ಸಿಂಗಲ್ಸ್ ಮತ್ತು 16 ವರ್ಷದ ಮಕ್ಕಳಿಗೆ ಡಬಲ್ಸ್ ಪಂದ್ಯವನ್ನು ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ತಮ್ಮ ವಯಸ್ಸಿನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಕಾಡಮಿಯ ಉಪಾಧ್ಯಕ್ಷರಾದ ಎಂ. ಭಾಸ್ಕರ ರೈ ಮತ್ತು ಎಸ್. ಬುಜಂಗ ಆಚಾರ್ಯ ಉಪಸ್ಥಿತರಿದ್ದರು.
Next Story