ಎ.20: ಮಂಗಳೂರು ನಗರಕ್ಕೆ ನೀರು ಸ್ಥಗಿತ
ಮಂಗಳೂರು, ಎ.19: ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯಲ್ಲಿ ಬರುವ 80 ಎಂ.ಎಲ್.ಡಿ ಎಲ್.ಎಲ್.ಪಿ.ಎಸ್.-2 ಹಾಗೂ ನೀರು ಪೂರೈಕೆಯ ಮೂಲವಾದ ತುಂಬೆಯ ಕೆಳಗಿನ ರೇಚಕ ಸ್ಥಾವರಗಳಿಗೆ ಸಂಬಂಧಿಸಿದ ಜಾಕ್ ವೆಲ್ನಲ್ಲಿ ನೇತ್ರಾವತಿ ನದಿಯ ನೀರಿನಲ್ಲಿ ಹರಿದು ಬರುವ ತ್ಯಾಜ್ಯ ವಸ್ತುಗಳು, ಕಸಕಡ್ಡಿಗಳು, ಮಡ್ಡಿ ಮರಳು ಇತ್ಯಾದಿಗಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿದೆ.
ಇದನ್ನು ಸರಿಪಡಿಸಲು, ಜಾಕ್ವೆಲ್ಗಳಲ್ಲಿ ಶೇಖರಣೆಗೊಂಡಿರುವ ತ್ಯಾಜ್ಯ ವಸ್ತುಗಳು, ಮಡ್ಡಿಯನ್ನು ಶುಚಿಗೊಳಿಸುವ ಕಾರ್ಯವನ್ನು ಹಾಗೂ ಎಚ್.ಎಲ್.ಪಿ.ಎಸ್. -2 ರಲ್ಲಿ ದುರಸ್ತಿ ಕೆಲಸ ನಿರ್ವಹಿಸಲು ಎಪ್ರಿಲ್ 20ರಂದು ಪೂರ್ವಾಹ್ನ ಗಂಟೆ 6 ರಿಂದ ಸಂಜೆ 6 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಸದ್ರಿ ಅವಧಿಯಲ್ಲಿ ಮಂಗಳೂರು ನಗರಕ್ಕೆ ನೀರು ಸರಬರಾಜನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಮಹಾನಗರಪಾಲಿಯ ಆಯುಕ್ತರ ಪ್ರಕಟನೆ ತಿಳಿಸಿದೆ.
Next Story