ಮಂಗಳೂರು: ಕಾರಿಗೆ ಹಾಕಿದ್ದ ಲಾಕನ್ನೇ ಕದ್ದೊಯ್ದ !
ಮಂಗಳೂರು, ಎ. 22: ನಗರದ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿದ್ದ ಕಾರಿಗೆ ಹಾಕಿದ್ದ ವೀಲ್ ಲಾಕನ್ನೇ ಕದ್ದೊಯ್ದ ಘಟನೆ ನಡೆದಿದೆ.
ಲೈಟ್ಹೌಸ್ಹಿಲ್ ರಸ್ತೆಯಲ್ಲಿ ಎ.17ರಂದು ಮಧ್ಯಾಹ್ನ 1:30ಕ್ಕೆ ಕಾರೊಂದು ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಲಾಗಿತ್ತು. ಬಂದರು ಸಂಚಾರಿ ಪೊಲೀಸರು ಕಾರಿಗೆ ವೀಲ್ ಲಾಕ್ ಮಾಡಿದ್ದರು. ಆದರೆ, ಚಾಲಕ ವೀಲ್ ಲಾಕ್ ಸಹಿತ ಟಯರ್ ತೆಗೆದು ಅದಕ್ಕೆ ಬೇರೆ ಟಯರ್ ಹಾಕಿ ಪರಾರಿಯಾದ ಘಟನೆ ನಡೆದಿದೆ.
ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಕಾರು ಇರಲಿಲ್ಲ. ವೀಲ್ ಲಾಕ್ನ ಮೌಲ್ಯ ಸುಮಾರು 3 ಸಾವಿರ ಎಂದು ಅಂದಾಜಿಸಲಾಗಿದೆ. ಬಂದರು ಸಂಚಾರಿ ಠಾಣೆಯ ಟ್ರಾಫಿಕ್ ಸಿಬ್ಬಂದಿ ಸಿಎಸ್ಐ ರುದ್ರಪ್ಪ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
Next Story