ಎಸೆಸೆಲ್ಸಿ: ಆಯಿಶಾ ಹೆಣ್ಮಕ್ಕಳ ಪ್ರೌಢಶಾಲೆ ಆತೂರು ಶೇ. 100 ಫಲಿತಾಂಶ
ಬಿ.ಕೆ ಪರ್ಝಾನ, ಫಾತಿಮಾ ಫಿದಾ, ಫಾತಿಮಾ ಅಝ್ಮಿಯಾ, ಅನೂಫಾ, ಶೈಮಾ
ಆತೂರು, ಮೇ 7: 2017-18ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಗೆ ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢಶಾಲೆಯಿಂದ 25 ವಿದ್ಯಾರ್ಥಿನಿಯರು ಹಾಜರಾಗಿದ್ದು, 8 ಮಂದಿ ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿ , 14 ಮಂದಿ ಪ್ರಥಮ ಶೇಣಿ, ಮೂವರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶೇ.100 ಫಲಿತಾಂಶ ಪಡೆದಿದೆ.
ಬಿ.ಕೆ ಪರ್ಝಾನ 580 ಅಂಕ, ಫಾತಿಮಾ ಫಿದಾ 578, ಫಾತಿಮಾ ಅಝ್ಮಿಯಾ 575, ಅನೂಫಾ 570, ಶೈಮಾ 568, ನಈಮಾ ಮರಿಯಂ 547, ಆಯಿಶಾ ತಹಾನಿ 544, ಆಯಿಶಾ ರಾಹಿಲಾ 539 ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಂಶುಪಾಲರಾದ ಆಯಿಶಾ ಫರ್ಝಾನ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story