ಮಂಗಳೂರು: ನೇಣು ಬಿಗಿದು ಉದ್ಯಮಿ ಆತ್ಮಹತ್ಯೆ
ಮಂಗಳೂರು, ಮೇ 19: ನಗರದ ಶಿವಭಾಗ್ ನಿವಾಸಿ ಬಿಲ್ಡರ್ ಸುರೇಶ್ ಭಂಡಾರಿ (62) ಶನಿವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಉದ್ಯಮ ರಂಗದಲ್ಲಿ ತೊಡಗಿಸಿಕೊಂಡಿದ್ದ ಸುರೇಶ್ ಭಂಡಾರಿ ಅವರು, ಬಿಲ್ಡರ್ ಕೂಡ ಆಗಿದ್ದರು. ಮೂರು ವರ್ಷಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರೆಂದು ಹೇಳಲಾಗಿದೆ.
ಮಾನಸಿಕವಾಗಿ ನೊಂದುಕೊಂಡಿದ್ದ ಅವರು ಇದೇ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ. ಮನೆಯಲ್ಲಿ ಪತ್ನಿಯ ಜತೆ ವಾಸವಿದ್ದು, ಮನೆಯ ಹಿಂಭಾಗಕ್ಕೆ ತೆರಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story