ನಗದು ಸಹಿತ ರೂಮ್ಬಾಯ್ ಪರಾರಿ
ಹೆಬ್ರಿ, ಮೇ 20: ಹೆಬ್ರಿಯ ಲಾಡ್ಜ್ವೊಂದರ ರೂಮ್ ಬಾಯ್ ನಗದು ಸಹಿತ ಪರಾರಿಯಾಗಿರುವ ಘಟನೆ ಮೇ 18ರಂದು ರಾತ್ರಿ ವೇಳೆ ನಡೆದಿದೆ.
ಹೆಬ್ರಿಯ ವಿಜಯಲಕ್ಷ್ಮೀ ಲಾಡ್ಜಿಂಗ್ನಲ್ಲಿ ರೂಮ್ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಸಂತೋಷ ಎಂಬಾತ ಲಾಡ್ಜ್ನ ಸ್ಟೋರ್ ರೂಮ್ನ ಗೊಡ್ರೇಜ್ ಬೀಗ ಒಡೆದು ಅದರಲ್ಲಿದ್ದ 13,000ರೂ. ನಗದು ಕಳವು ಮಾಡಿ ಕೊಂಡು ಹೋಗಿದ್ದಾನೆ ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story