ಬಿಐಟಿ ಸಮೂಹ ಸಂಸ್ಥೆ: ವೃತ್ತಿಪರ ಕೋರ್ಸುಗಳ ಕಾರ್ಯಾಗಾರ
ಬಂಟ್ವಾಳ, ಮೇ 21: ಬಿಐಟಿ ಸಮೂಹ ಸಂಸ್ಥೆಯ ವತಿಯಿಂದ ವೃತ್ತಿಪರ ಕೋರ್ಸುಗಳ ಮಾರ್ಗದರ್ಶನ ಕಾರ್ಯಾಗಾರ ವಿಟ್ಲದ ಎಮಿನೆಂಟ್ ಟ್ಯುಟೋರಿಯಲ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.
ಬಿಐಟಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಅಝೀಝ್ ಮುಸ್ತಫಾ, ವಿನುತಾ, ಮುಸ್ತಫಾ ಖಲೀಲ್, ಇಮ್ರಾನ್ ಅಹ್ಮದ್ ಹಾಗೂ ಸಫ್ವಾನ್ ಅವರು ಕಾರ್ಯಾಗಾರವನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ವಿವಿಧ ವೃತ್ತಿಪರ ಕೋರ್ಸುಗಳ ಮಾರ್ಗದರ್ಶನ ಹಾಗೂ ಸ್ಕಾಲರ್ಶಿಫ್ಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಎಮಿನೆಂಟ್ ಸಂಸ್ಥೆಯ ಮುಖ್ಯಸ್ಥ ಝುಬೇರ್ ಉಪಸ್ಥಿತರಿದ್ದರು.
Next Story