ಉಡುಪಿ: ಆನ್ಲೈನ್ನಲ್ಲಿ ಕಟ್ಟಡ ಪರವಾನಗಿ
ಉಡುಪಿ, ಮೇ 23: ಕರ್ನಾಟಕ ಸರಕಾರವು ಅಮೃತ್ ಯೋಜನೆ ಯಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಗಿ ಪಡೆಯುವುದನ್ನು ಸಂಪೂರ್ಣ ಆನ್ಲೈನ್ ಮಾಡಿದೆ. ಆದ್ದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಇನ್ನು ಮುಂದೆ ಕಟ್ಟಡ ಪರವಾನಗಿ ಪಡೆಯಲು ನಗರಸಭೆಯಲ್ಲಿ ನೋಂದಾಯಿಸಿದ ಆರ್ಕಿಟೆಕ್ಟ್/ಸೂಪರ್ವೈಸರ್/ಕನ್ಸಲ್ಟಿಂಗ್ ಇಂಜಿನಿಯರ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಂತೆ ಉಡುಪಿ ನಗರಸಭೆಯ ಪೌರಾುುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story