ಸಾಲಿಗ್ರಾವು ಪಟ್ಟಣ ಪಂಚಾಯತ್ನಲ್ಲಿ ಯೋಗ ದಿನ
ಸಾಲಿಗ್ರಾಮ, ಜೂ.21: ಸಾಲಿಗ್ರಾಮ ಪಟ್ಟಣ ಪಂಚಾಯತ್ನ ಶ್ರೀಗುರು ನರಸಿಂಹ ದೇವಸ್ಥಾನ ವಠಾರದ ಶ್ರೀಅನ್ನದಾಯಿನಿ ಧರ್ಮ ಛತ್ರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಆರ್ಟ್ ಆಫ್ ಲಿವಿಂಗ್ನ ರಾಘವೇಂದ್ರ ಪೈ ಭಾಗವಹಿಸಿರುವ ಯೋಗಾರ್ಥಿಗಳಿಗೆ ಯೋಗದ ಮಹತ್ವವನ್ನು ಯೋಗಾಸನ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿಗಳನ್ನು ನೀಡಿ ಆಚರಿಸಲಾಯಿತು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ರತ್ನಾ ನಾಗರಾಜ ಗಾಣಿಗ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ದಲ್ಲಿ ಮುಖ್ಯಾಧಿಕಾರಿ ಶ್ರೀಪಾದ್, ಪಟ್ಟಣ ಪಂಚಾಯತ್ ಸದಸ್ಯ ಸಂಜೀವ್ ದೇವಾಡಿಗ ಾಗೂ ಸಿಬ್ಬಂದಿಗಳು ಭಾಗವಹಿಸಿದರು.
Next Story