ಎಸ್ಡಿಪಿಐ ಜಿಲ್ಲಾಧ್ಯಕ್ಷರಾಗಿ ಆಸೀಫ್ ಕೋಟೇಶ್ವರ ಪುನರಾಯ್ಕೆ
ಉಡುಪಿ, ಜೂ. 24: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ಆಸಿಫ್ ಕೋಟೇಶ್ವರ್ ಪುನರಾ ಯ್ಕೆಗೊಂಡಿದ್ದಾರೆ.
ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಜಿಲ್ಲಾ ಸಮಿತಿಯನ್ನು ಆಂತರಿಕ ಚುನಾವಣೆಯ ಮೂಲಕ ರವಿವಾರ ಆಯ್ಕೆ ಮಾಡಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅಝರ್ ಉಡುಪಿ, ಉಪಾದ್ಯಕ್ಷರಾಗಿ ಅಬ್ದುಲ್ ರೆಹ್ಮಾನ್ ಮಲ್ಪೆ, ಖಜಾಂಚಿಯಾಗಿ ಇಸ್ಮಾಯಿಲ್ ಕಟಪಾಡಿ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು.
ಚುನಾವಣಾ ಪ್ರಕ್ರಿಯೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕುಡ್ಲಿಪೇಟೆ ಹಾಗೂ ದ.ಕ. ಜಿಲ್ಲಾಧ್ಯಕ್ಷ ಅತಾವುಲ್ಲಾ ಜೋಕಟ್ಟೆ ನಡೆಸಿಕೊಟ್ಟರು.
Next Story