ಕಿನ್ಯ ಮದ್ರಸ ಪ್ರಾರಂಭೋತ್ಸವ
ಉಳ್ಳಾಲ, ಜೂ.26:ಕಿನ್ಯ ನೂರುಲ್ ಉಲಮಾ ಮದ್ರಸಾ ಪ್ರಾರಂಭೋತ್ಸವವು ಕಿನ್ಯ ನೂರುಲ್ ಉಲಮ ಮದ್ರಸ ಸಭಾಂಗಣದಲ್ಲಿ ಉಲಮಾ ನಾಯಕರ ಸಮ್ಮುಖದಲ್ಲಿ ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಸಮಿತಿಯ ಸಹಯೋಗದೊಂದಿಗೆ ನಡೆಯಿತು.
ಸ್ಥಳೀಯ ಖತೀಬ್ ಉಸ್ಮಾನ್ ಸಖಾಫಿ ದುಆ ಹಾಗೂ ವಿದ್ಯಾರ್ಥಿಗಳಿಗೆ ಉಪದೇಶ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೆಹಬೂಬ್ ಸಖಾಫಿ ಕಿನ್ಯ, ಶೌಕತ್ ಸಖಾಫಿ, ಮುಹಮ್ಮದ್ ಮುಸ್ಲಿಯಾರ್, ಕಿನ್ಯ ಸೆಕ್ಟರ್ ಉಸ್ತುವಾರಿ ಜಿ.ಐ. ಇಬ್ರಾಹೀಂ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಬುಖಾರಿ ಜುಮಾ ಮಸೀದಿಯ ಉಪಾಧ್ಯಕ್ಷ ಕೆ.ಎಚ್.ಮೂಸಕುಂಞಿ, ಮುಹಮ್ಮದ್ ಉಳ್ಳಾಲ, ಅಯ್ಯೂಬ್, ಆಶಿಕ್, ನೌಫಲ್, ರಿಝ್ವಾನ್, ಸಾದಿಕ್ ಉಪಸ್ಥಿತರಿದ್ದರು. ಇರ್ಫಾನ್ ನೂರಾನಿ ಸ್ವಾಗತಿಸಿದರು.
Next Story