ಜೂ. 30: ಬೈರಿಕಟ್ಟೆಯಲ್ಲಿ ಹಜ್ ತರಬೇತಿ ಶಿಬಿರ
ವಿಟ್ಲ, ಜೂ. 28: ಸಮೀಪದ ಬೈರಿಕಟ್ಟೆ ಜಲಾಲಿಯಾ ಜುಮಾ ಮಸೀದಿ ಹಾಗೂ ಮವೂನತುಲ್ ಇಸ್ಲಾಂ ಯುವಜನ ಕಮಿಟಿ ಸಹಯೋಗದೊಂದಿಗೆ ಹಜ್ ತರಬೇತಿ ಶಿಬಿರವು ಜೂ.30 ರಂದು ಬೆಳಗ್ಗೆ 9:30ಕ್ಕೆ ಬೈರಿಕಟ್ಟೆ ಮುನವ್ವಿರುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆಯಲಿದೆ.
ಮಸೀದಿ ಖತೀಬ್ ಎನ್.ಎ. ಅಬ್ದುರ್ರಹ್ಮಾನ್ ಮದನಿ ಜೆಪ್ಪು ದುಆ ನೆರವೇರಿಸುವರು. ನ್ಯಾಯವಾದಿ ಡಿ.ಬಿ. ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸುವರು. ಮಹಮೂದುಲ್ ಫೈಝಿ ವಾಲೆಮುಂಡೋವು ಉದ್ಘಾಟಿಸುವರು. ಅಬ್ದುಲ್ ಹಮೀದ್ ಬಾಖವಿ ಹಜ್ ತರಗತಿ ನಡೆಸುವರು. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ. ಮೋನು ಕಣಚೂರು, ವಕ್ಫ್ ಸಮಿತಿ ಆಹ್ವಾನಿತ ಸದಸ್ಯ ಉಸ್ಮಾನ್ ಕರೋಪಾಡಿ, ವಕ್ಫ್ ಸಮಿತಿ ಸದಸ್ಯ ರಶೀದ್ ವಿಟ್ಲ, ಸದರ್ ಸಲೀಂ ಮದನಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಹಜ್ ಗೆ ಸರಕಾರ ಹಾಗೂ ಖಾಸಗಿಯಾಗಿ ತೆರಳುವ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡಿಸುವಂತೆ ಸಂಘಟಕರು ತಿಳಿಸಿದ್ದಾರೆ.
Next Story