ಜು.10: ದೇರಳಕಟ್ಟೆ ರೇಂಜ್ ಮಹಾಸಭೆ
ದೇರಳಕಟ್ಟೆ, ಜು.9: ಮದ್ರಸ ಅಧ್ಯಾಪಕರ ಒಕ್ಕೂಟವಾದ ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ನ ವಾರ್ಷಿಕ ಮಹಾಸಭೆಯು ಜು.10ರಂದು ಬೆಳಗ್ಗೆ 8 ಗಂಟೆಗೆ ದೇರಳಕಟ್ಟೆ ಹಯಾತುಲ್ ಇಸ್ಲಾಮ್ ಕೇಂದ್ರ ಮದ್ರಸದಲ್ಲಿ ನಡೆಯಲಿದೆ.
ಸಮಸ್ತ ವಿದ್ಯಾಭ್ಯಾಸ ಮಂಡಳಿಯ ಶಿಕ್ಷಣಾಧಿಕಾರಿ ಉಮರುಲ್ ಫಾರೂಖ್ ದಾರಿಮಿ ತೆಕ್ಕಾರು ಅಧ್ಯಕ್ಷತೆ ವಹಿಸಲಿದ್ದಾರೆ. ದೇರಳಕಟ್ಟೆ ಬದ್ರಿಯಾ ಕೇಂದ್ರ ಜುಮಾ ಮಸೀದಿ ಖತೀಬ್ ಶರೀಫ್ ಅರ್ಶದಿ ಸಭೆ ಉದ್ಘಾಟಿಸಲಿದ್ದಾರೆ. ತ್ವಾಹ ವಾಫಿ ಕಣ್ಣೂರು ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಫಾರೂಖ್ ದಾರಿಮಿ ಗ್ರಾಮಚಾವಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story