ಸಿಎ-ಸಿಪಿಟಿಯಲ್ಲಿ ಆಳ್ವಾಸ್ ಅತ್ಯುತ್ತಮ ಸಾಧನೆ
►74 ವಿದ್ಯಾರ್ಥಿಗಳು ತೇರ್ಗಡೆ ►ಉನ್ನತ ಶ್ರೇಣಿ ಪಡೆದ 9 ಮಂದಿ ವಿದ್ಯಾರ್ಥಿಗಳು
ಮೂಡುಬಿದಿರೆ,ಜು.21: ಆಳ್ವಾಸ್ ಪಿಯು ಕಾಲೇಜಿನ 147 ಮಂದಿ ವಿದ್ಯಾರ್ಥಿಗಳು ಸಿಎ-ಸಿಪಿಟಿ ಪರೀಕ್ಷೆ ಬರೆದಿದ್ದು, ಅದರಲ್ಲಿ 74 ಮಂದಿ ತೇರ್ಗಡೆ ಹೊಂದಿದ್ದಾರೆ. 9ಮಂದಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಆಳ್ವಾಸ್ ವಿದ್ಯಾರ್ಥಿಗಳಾದ ಅಶ್ವಿನಿ ಶೆಣೈ, ನೂತನ್ ಬಿ.ಯು, ಶುಭಕರ್ ಎ.ಚೌಗಲೆ, ಹರ್ಷಿತ್ ವಿ., ರಕ್ಷಾ ರಮೇಶ್ ಶೆಟ್ಟಿ, ಹರ್ಷಿತ್ ವೈ, ಶ್ರೇಯಾ ಡಿ., ಸುಕ್ಷ್ಮಾ ಎಸ್.ಆಚಾರ್ಯ, ಭರತ್ ಗಜಾನನ ಹೆಗ್ಡೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು. ವಿದ್ಯಾರ್ಥಿಗಳಾ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
Next Story