‘ಬೀಸ್ಪೋಕ್ ಲಕ್ಸುರಿಯಸ್ ಐಫೋನ್ಸ್’ ಮಳಿಗೆ ಶುಭಾರಂಭ
ಮಂಗಳೂರು, ಜು.22: ಹಾಜಿ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ಬೀಸ್ಪೋಕ್ ಲಕ್ಸುರಿಯಸ್ ಐಫೋನ್ಸ್ ಮಳಿಗೆ ನಗರದ ಸಿಟಿ ಸೆಂಟರ್ ಮಾಲ್ನಲ್ಲಿ ರವಿವಾರ ಶುಭಾರಂಭಗೊಂಡಿತು.
ಕರ್ನಾಟಕ ಜ್ಯುವೆಲರ್ಸ್ ಫೆಡರೇಶನ್ಸ್ನ ಚೆಯರ್ ಮ್ಯಾನ್ ಜಯ ಆಚಾರ್ಯ ಬೀಸ್ಪೋಕ್ ಲೆಕ್ಸುರಿಯಸ್ ಐಫೋನ್ಸ್ ಮಳಿಗೆಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಗರದಲ್ಲಿ ಈಗಾಗಲೇ ಬೇಕಾದಷ್ಟು ಐಫೋನ್ಸ್ ಮಳಿಗೆಗಳಿದ್ದು, ಅದಕ್ಕಿಂತ ಹೆಚ್ಚು ಉತ್ಕೃಷ್ಠ ಮಟ್ಟದ ಲಕ್ಸುರಿಯಸ್ ಐಫೋನ್ಗಳ ಮಳಿಗೆಯನ್ನು ಇಂದು ಉದ್ಘಾಟಿಸಲಾಗಿದೆ. ಮಂಗಳೂರು ಮೆಟ್ರೋ ನಗರದಂತೆ ಬೆಳೆಯುತ್ತಿದ್ದು, ಅದರಂತೆ ಎಲ್ಲ ಜನರಿಗೂ ಬ್ರಾಂಡೆಡ್ ಮೊಬೈಲ್ಗಳು ದೊರೆಯಲಿವೆ ಎಂದರು.
ಹಾಜಿ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥಾಪಕ ಸಂಸ್ಥೆಯ ಪಾಲುದಾರ ಮುಹಮ್ಮದ್ ಶಹಾಬುದ್ದೀನ್ ಮಾತನಾಡಿ, ಮಂಗಳೂರು ಜನತೆ ಐಶಾರಾಮಿ ಜೀವನವನ್ನು ನಡೆಸಲು ಇಷ್ಟ ಪಡುತ್ತಾರೆ. ಅದಕ್ಕೆ ತಕ್ಕಂತೆಯೇ ಐಶಾರಾಮಿ ಮೊಬೈಲ್ಗಳನ್ನು ಖರೀದಿಸಲಿದ್ದಾರೆ. ಅಂತಹ ಬೇಡಿಕೆ ಈಡೇರಿಸಲು ಐಶಾರಾಮಿ ಐಫೋನ್ಗಳ ಮಳಿಗೆ ತೆರೆಯಲಾಗಿದೆ ಎಂದರು.
ಮಳಿಗೆಯಲ್ಲಿ ಪ್ಲಾಟಿನಂ, ಡೈಮಂಡ್, ಗೋಲ್ಡ್ ಲೇಪಿತ ಐಫೋನ್ಗಳು ಲಭ್ಯವಿದ್ದು, ಐಫೋನ್ 7ಗೆ 49,000 ರೂ., ಐಫೋನ್7+ಗೆ 79,000 ರೂ., ಐಫೋನ್ Xಗೆ 99,000 ರೂ. ಬೆಲೆಗಳಲ್ಲಿ ದೊರೆಯುತ್ತವೆ. ಇಲ್ಲಿ ಸುಮಾರು 50 ಸಾವಿರ ರೂಪಾಯಿಯಿಂದ 2.50 ಲಕ್ಷ ರೂ.ವರೆಗಿನ ಐಶಾರಾಮಿ ಐಫೋನ್ಗಳು ಮಾರಾಟಕ್ಕಿವೆ. ಮಳಿಗೆ ಶುಭಾರಂಭದ ಪ್ರಯುಕ್ತ ಇಂದು ಶೇ.60ರಷ್ಟು ರಿಯಾಯಿತಿ ದರ ನಿಗದಿ ಪಡಿಸಿದೆ ಎಂದರು.
ಈ ಸಂದರ್ಭದಲ್ಲಿ ಫಲಾಹ್ ಎಜ್ಯುಕೇಶನ್ ಸೊಸೈಟಿಯ ಖಜಾಂಚಿ ಇಸ್ಮಾಯೀಲ್ ನಾಗತೋಟ, ಪಿನೊರೊದ ವ್ಯವಸ್ಥಾಪದ ನಿರ್ದೇಶಕ ಪಿಂಕೇಶ್ ಬಾಂಬೆ, ಮೊಹ್ತೆಶಾಮ್ ಬಿಲ್ಡರ್ಸ್ನ ಹರ್ಷದ್, ಸೌದ್, ಸಿದ್ದೀಕ್ ಮತ್ತಿತರರಿದ್ದರು.