ವಡ್ಡರ್ಸೆ ದೇವಸ್ಥಾನದಲ್ಲಿ ಕಳವು
ಕೋಟ, ಜು.23: ವಡ್ಡರ್ಸೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜು. 21 ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೇವಸ್ಥಾನದ ಪ್ರದಾನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮಹಾ ಲಿಂಗೇಶ್ವರ ದೇವರ ಗರ್ಭ ಗುಡಿಯ ಬಾಗಿಲು ಒಡೆದು ದೇವರ ಬೆಳ್ಳಿಯ ಮುಖವಾಡ ಹಾಗೂ ಗಣಪತಿ ದೇವರ ಮತ್ತು ಪಾರ್ವತಿ ದೇವರ ಗುಡಿಯ ಬೀಗ ಒಡೆದು ಆ ಎರಡೂ ದೇವರ ಬೆಳ್ಳಿಯ ಮುಖವಾಡ ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 15,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story