ಸಂತ ರೀಟಾ ಅನುದಾನಿತ ಶಾಲೆಯಲ್ಲಿ ಹೆತ್ತವರ-ಶಿಕ್ಷಕರ ಸಮಾವೇಶ
ವಿಟ್ಲ, ಜು. 24: ಸಂತ ರೀಟಾ ಅ.ಹಿ.ಪ್ರಾ.ಶಾಲೆಯಲ್ಲಿ ಶನಿವಾರ ಹೆತ್ತವರ ಮತ್ತು ಶಿಕ್ಷಕರ ಸಮಾವೇಶ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಜೊತೆ ಕಾರ್ಯದರ್ಶಿ ಮಕ್ಕಳಲ್ಲಿ ಪ್ರೀತಿ, ಸೌಹಾರ್ದತೆ, ಗೌರವ ನೀಡುವುದನ್ನು ಓದಿನೊಂದಿಗೆ ಶಿಕ್ಷಕರಷ್ಟೇ ಹೆತ್ತವರು ಕಾಳಜಿ ವಹಿಸಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಿ ಉತ್ತಮ ನಾಗರೀಕನಾಗಲು ಸಾಧ್ಯ ಎಂದು ಅತಿಥಿಗಳಾಗಿದ್ದ ಸ್ಟಾನಿಸ್ಲವ್ ರೆಬೆಲ್ಲೊರವರು ಮಾತನಾಡಿದರು.
ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಚಾರ್ಲಿ ಸಿಕ್ವೇರಾ, ಆಂಗ್ಲಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕರಾದ ವಂ. ಡಿಸೋಜ ಉಪಸ್ಥಿತರಿದ್ದರು. ಹೆತ್ತವರ ಪರವಾಗಿ ಅಬ್ದುಲ್ ಗಫೂರ್, ಬಬಿತಾ ಮುಂತಾದವರು ಶಾಲೆಯ ಶಿಕ್ಷಣದ ಗುಣಮಟ್ಟ, ಶಿಕ್ಷಕರ ಶ್ರಮದ ಬಗ್ಗೆ ಉತ್ತಮ ಅನಿಸಿಕೆ ವ್ಯಕ್ತಪಡಿಸಿದರು. ಮುಖ್ಯ ಶಿಕ್ಷಕರಾದ ಸಿಸ್ಟರ್ ಜೊನೆಟ್ ಡಿಸೋಜ ಶೈಕ್ಷಣಿಕ ವರದಿ ಮಂಡಿಸಿದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. ಸಹ ಶಿಕ್ಷಕಿಯರಾದ ಬೆನಡಿಕ್ಟಾ ಡಿಸೋಜ ಸ್ವಾಗತಿಸಿ, ಸಹ ಶಿಕ್ಷಕಿ ಲೀನಾ ವೇಗಸ್ ಧನ್ಯವಾದ ವಿತ್ತರು. ಸಹಶಿಕ್ಷಕ ಸಿ.ಜಯರಾಮ ಶಾಸ್ತ್ರಿ ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿ ನಿರೂಪಣೆ ಮಾಡಿದರು.