ಪಡುಬಿದ್ರೆ: ಅಪಘಾತಕ್ಕೀಡಾಗಿ ಗ್ಯಾರೇಜಿಗೆ ನುಗ್ಗಿದ ಕಾರು!
ಪಡುಬಿದ್ರೆ, ಆ.1: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಢಿಕ್ಕಿ ಹೊಡೆದು ಬಳಿಕ ಗ್ಯಾರೇಜೊಂದಕ್ಕೆ ನುಗ್ಗಿದ ಘಟನೆ ಪಡುಬಿದ್ರೆಯ ಕಲ್ಸಂಕ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕಲ್ಸಂಕದ ಬಳಿ ಇಂದು ಪೂರ್ವಾಹ್ನ 11 ಗಂಟೆ ಸುಮಾರಿಗೆ ಕಾರೊಂದು ಬೈಕಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಅಪಘಾತದ ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿರುವ ಗ್ಯಾರೇಜೊಂದಕ್ಕೆ ನುಗ್ಗಿದೆ. ಅಪಘಾತದ ಸದ್ದು ಕೇಳಿ ಗ್ಯಾರೇಜಿನ ಸಿಬ್ಬಂದಿ ಹೊರಗೋಡಿದ್ದರಿಂದ ಸಂಭಾವ್ಯ ಅಪಾಯದಿಂದ ಅವರು ಪಾರಾಗಿದ್ದಾರೆ.
ಘಟನೆಯಲ್ಲಿ ಗ್ಯಾರೇಜಿನಲ್ಲಿ ನಿಲ್ಲಿಸಿದ್ದ ಎರಡು ಬೈಕ್ಗಳು ಸಂಪೂರ್ಣ ಜಖಂಗೊಂಡಿವೆ.
Next Story