ಮಂಗಳೂರು: ಟಿಕೆಟ್ ನೀಡದ ಬಸ್ ವಿರುದ್ಧ ಕೇಸು ದಾಖಲು
ಮಂಗಳೂರು, ಆ.18: ನಗರದಲ್ಲಿ ಪ್ರಯಾಣಿಕರಿಂದ ಹಣ ತೆಗೆದುಕೊಂಡು ಟಿಕೆಟ್ ನೀಡದೆ ಸಂಚರಿಸುವ ಮತ್ತು ನಿರ್ಲಕ್ಷ್ಯ ಚಾಲನೆ ಆರೋಪದ ಮೇಲೆ 189 ಬಸ್ಗಳ ವಿರುದ್ಧ ಕೇಸು ದಾಖಲಿಸಿ, ದಂಡ ವಿಧಿಸಲಾಗಿದೆ.
ನಗರದ ಪೊಲೀಸ್ ಕಮಿಷನರ್ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬಸ್ಗಳಲ್ಲಿ ಟಿಕೆಟು ನೀಡದಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
ನಗರದ ನಾನಾ ಕಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ಸುಮಾರು 189 ಬಸ್ಗಳ ವಿರುದ್ಧ ಕೇಸು ದಾಖಲಿಸಿ 21,500ರೂ. ದಂಡ ವಸೂಲಿ ಮಾಡಿದ್ದಾರೆ.
Next Story