ಅಕ್ರಮ ಮದ್ಯ ಸಾಗಾಟ: ಸೊತ್ತು ಸಹಿತ ಆರೋಪಿ ಸೆರೆ
ಬಂಟ್ವಾಳ, ಆ. 29: ಕಾರಿನಲ್ಲಿ ಅಕ್ರಮ ಮದ್ಯ ಸಾಗಾಟದ ಆರೋಪದ ಮೇರೆಗೆ ಮದ್ಯ ಸಹಿತ ಆರೋಪಿಯೋರ್ವನನ್ನು ಬಂಧಿಸಿದ ಘಟನೆ ಬಂಟ್ವಾಳ ಪೇಟೆಯಲ್ಲಿ ಬುಧವಾರ ಸಂಜೆ ನಡೆದಿದೆ.
ಕಾರು ಚಾಲಕ, ಬಂಟ್ವಾಳದ ಕುದನೆ ನಿವಾಸಿ ನಾಗೇಶ್ ಬಂಧಿತ ಆರೋಪಿ.
ಈತ ಅಧಿಕ ಲಾಭ ಪಡೆಯುವ ಉದ್ದೇಶದಿಂದ ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದನ್ನು ಬಂಟ್ವಾಳ ನಗರ ಪೊಲೀಸರು ಬುಧವಾರ ಸಂಜೆ ಬಂಟ್ವಾಳ ಪೇಟೆಯಲ್ಲಿ ಪತ್ತೆ ಹಚ್ಚಿ, ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬಂಧಿತನಿಂದ ಸುಮಾರು 6 ಸಾವಿರ ರೂ. ಮೌಲ್ಯದ ಮದ್ಯ ಸಹಿತ ಕಾರನ್ನು ವಶಪಡಿಸಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Next Story